ಪನೀರ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ!!! ಅದರಲ್ಲಿಯೂ ಪಾಲಾಕ್ ಪನೀರ್ ರೋಲ್ ಒಂದು ಒಳ್ಳೆಯ ಕಾಂಬಿನೇಷನ್. ಇದನ್ನು ಸುಲಭವಾಗಿ ಮನೆಯಲ್ಲೇ ಹೇಗೆ ಮಾಡುವುದು ಎಂದು ಹೇಳುತ್ತೀವೆ. ನೀವೂ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ..
ತಯಾರಿಸಲು ಬೇಕಾಗುವ ಸಾಮಗ್ರಿಗಳು :
* ಆಲೂಗಡ್ಡೆ 2
* 100 ಗ್ರಾಂ ಪನೀರ್
* ಪಾಲಾಕ್ ಸೊಪ್ಪು 1 ಕಟ್ಟು
* ಈರುಳ್ಳಿ 1
* 2 ಕಪ್ ಗೋಧಿ ಹಿಟ್ಟು
* 2 ಚಮಚ ಎಣ್ಣೆ
* ಕರಿಬೇವು
* ಪನೀರ್ ತುಂಡುಗಳು
* 1 ಚಮಚ ಗರಂ ಮಸಾಲಾ
* 1 ಚಮಚ ಖಾರದಪುಡಿ
* ಕೊತ್ತಂಬರಿ ಸೊಪ್ಪು
* ಟೋಮೊಟೋ ಕೆಚಪ್
* ಉಪ್ಪು
ತಯಾರಿಸುವ ವಿಧಾನ :
ಮೊದಲು 2 ಆಲೂಗಡ್ಡೆಯನ್ನು ಬೇಯಿಸಿ ಅದನ್ನು ಪುಡಿಮಾಡಬೇಕು. ನಂತರ ಪನೀರ್ ಮತ್ತು ಪಾಲಕ್ ಸೊಪ್ಪನ್ನು ಕಟ್ ಮಾಡಬೇಕು. ನಂತರ ಈರುಳ್ಳಿಯನ್ನು ಸಣ್ಣಗೆ ಕಟ್ ಮಾಡಬೇಕು. ನಂತರ ಗೋಧಿಹಿಟ್ಟಿಗೆ ಉಪ್ಪು, ಎಣ್ಣೆ, ಪುಡಿ ಮಾಡಿದ ಆಲೂಗಡ್ಡೆಯನ್ನು ಹಾಕಿ ನೀರನ್ನು ಹಾಕಿ ಗಟ್ಟಿಯಾಗಿ ಹಿಟ್ಟನ್ನು ಕಲೆಸಬೇಕು. ನಂತರ ಒಗ್ಗರಣೆಗೆ 1 ಚಮಚ ಎಣ್ಣೆ ಕರಿಬೇವು, ಈರುಳ್ಳಿ, ಪನೀರ್ ತುಂಡುಗಳು, ಉಪ್ಪು, ಗರಂ ಮಸಾಲಾ, ಖಾರದಪುಡಿ, ಪಾಲಕ್‌ಸೊಪ್ಪು, ಕೊತ್ತಂಬರಿ ಸೊಪ್ಪು ಹಾಕಿ 5 ನಿಮಿಷ ಬೇಯಿಸಬೇಕು. ನಂತರ ಚಪಾತಿಯನ್ನು ಮಾಡಿ ಅದರ ಮೇಲೆ 1 ಚಮಚ ಟೊಮೆಟೊ ಕೆಚಪ್ ಹಾಕಿ ಈಗಾಗಲೇ ಮಾಡಿರುವ ಮಸಾಲೆಯನ್ನು ಹಾಕಿ ರೋಲ್ ಮಾಡಬೇಕು. ನಂತರ ಫಾಯಿಲ್ ಪೇಪರಿನಲ್ಲಿ ಸುತ್ತಿದರೆ ಪಾಲಾಕ್ ಪನೀರ್ ರೋಲ್ ಸವಿಯಲು ಸಿದ್ಧ.