ನಿಪ್ಪಟ್ಟು ತಯಾರಿಸಲು ಬೇಕಾಗುವ ಸಾಮಗ್ರಿಗಳು :
* ಒಂದು ಬಟ್ಟಲು ಅಕ್ಕಿ ಹಿಟ್ಟು
* ಒಂದು ಬಟ್ಟಲು ಮೈದಾ ಹಿಟ್ಟು
* ಎರಡು ದೊಡ್ಡ ಚಮಚ ಹುರಿಗಡಲೆ ಹಿಟ್ಟು
* ಎರಡು ಚಮಚ ಕಡಲೆ ಹಿಟ್ಟು
* ಕರಿಬೇವಿನ ಸೊಪ್ಪು
* ಕಡ್ಲೆಕಾಯಿ ಬೀಜ
* ಬೇಕಾದಷ್ಟೇ ಹುರಿಗಡಲೆ
* ಸ್ವಲ್ಪ ಎಳ್ಳು
* ಖಾರದ ಪುಡಿ
* ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ :
ಮೊದಲು ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಹುರಿಗಡಲೆ ಹಿಟ್ಟು, ಕಡ್ಲೆಕಾಯಿ ಬೀಜ, ಹುರಿಗಡಲೆ, ಕರಿಬೇವು, ಎಳ್ಳು, ಉಪ್ಪು, ಖಾರದ ಪುಡಿ ಮತ್ತು ಕಾಯಿಸಿದ
ಎರಡು ಚಮಚ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಬೇಕು. ನಂತರ ಅದಕ್ಕೆ ನೀರು ಹಾಕಿ ಕಲೆಸಿಕೊಳ್ಳಬೇಕು. ನಂತರ ಕಲೆಸಿದ ಹಿಟ್ಟನ್ನು ಗೋಲಿ
ಗಾತ್ರದ ಉಂಡೆಗಳನ್ನು ಮಾಡಿಕೊಂಡು ಎಣ್ಣೆ ಸವರಿದ ಕವರ್ ಮೇಲೆ ಫಾಯಿಲ್ ಉಂಡೆಗಳನ್ನು ಸಣ್ಣ ಪೂರಿಯಂತೆ ಕೈಯಿಂದ ಅದುಮಿಕೊಂಡು ಪುಟ್ಟ
ಪುಟ್ಟದಾಗಿ ತಟ್ಟಬೇಕು. ಆದರೆ ಸ್ವಲ್ಪ ದಪ್ಪ ಇರಬೇಕು. ನಂತರ ಕಾದಿರುವ ಎಣ್ಣೆಗೆ ಹಾಕಿ ಎರಡೂ ಬದಿಯಲ್ಲಿ ಬೇಯಿಸಿ ಹೊಂಬಣ್ಣ ಬರುವವರೆಗೆ
ಕಾಯಿಸಿದರೆ ರುಚಿರುಚಿಯಾದ ನಿಪ್ಪಟ್ಟು ಸವಿಯಲು ಸಿದ್ಧ.