ಬೆಂಗಳೂರು: ಬಿಸಿ ಬಿಸಿಯಾಗಿರುವ ಈರುಳ್ಳಿ ದೋಸೆ ಮಾಡುವುದು ಬಹಳ ಸುಲಭ. ಬೆಳಿಗ್ಗೆ ಅಥವಾ ಸಂಜೆ ಹೊತ್ತಿಗೆ ತಿನ್ನುವುದಕ್ಕೆ ಇದು ಹೇಳಿ ಮಾಡಿಸಿದ ದೋಸೆ.
ಸಾಮಗ್ರಿಗಳು
1. ದೋಸೆ ಹಿಟ್ಟು - 1 ಕಪ್
2. ಈರುಳ್ಳಿ - 2
3. ಹಸಿಮೆಣಸಿನ ಕಾಯಿ - 3
4. ಕರಿಬೇವು - ಸ್ವಲ್ಪ
5. ಕೊತ್ತಂಬರಿ ಸೊಪ್ಪು - ಸ್ವಲ್ಪ
6. ತುರಿದ ಕ್ಯಾರೇಟ್ - ಸ್ವಲ್ಪ
7. ಉಪ್ಪು - ಸ್ವಲ್ಪ
8. ಎಣ್ಣೆ - ಸ್ವಲ್ಪ
ಮಾಡುವ ವಿಧಾನ: ಹುಳಿ ಬರಿಸಿದ ದೋಸೆ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ತುರಿದ ಕ್ಯಾರೆಟ್, ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ದೋಸೆ ಹೆಂಚು ಬಿಸಿ ಮಾಡಿ, ಸ್ವಲ್ಪ ಎಣ್ಣೆ ಸವರಿ. ಹೆಂಚು ಕಾದ ಮೇಲೆ ದಪ್ಪವಾಗಿ ದೋಸೆ ಹುಯ್ಯಿರಿ. ಸುತ್ತಲೂ ಎಣ್ಣೆ ಹಾಕಿ ಹದವಾದ ಉರಿಯಲ್ಲಿ ಎರಡೂ ಕಡೆ ಬೇಯಿಸಿದರೆ ಈರುಳ್ಳಿ ದೋಸೆ ಸವಿಯಲು ಸಿದ್ಧ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ