ಮೈಸೂರು ಮಸಾಲಾ ದೋಸಾ ಮಾಡಿ ಸವಿಯಿರಿ...

Webdunia
ಸೋಮವಾರ, 12 ನವೆಂಬರ್ 2018 (13:29 IST)
ನಮ್ಮ ದೇಶದಲ್ಲಿ ಎಲ್ಲೆಡೆ ಸಿಗುವ ಜನಪ್ರಿಯ ತಿಂಡಿ ಎಂದರೆ ಅದು ಮಸಾಲಾ ದೋಸೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ವಿಧದಲ್ಲಿ ಮಸಾಲಾ ದೋಸೆಯನ್ನು ಮಾಡುತ್ತಾರೆ. ಹಾಗೆಯೇ ಮೈಸೂರು ಮಸಾಲಾ ದೋಸೆ ಸಹ ಜನಪ್ರಿಯವಾಗಿದೆ. ಈ ಮೈಸೂರು ಮಸಾಲಾ ದೋಸೆಯನ್ನು ಮಾಡುವ ವಿಧಾನಕ್ಕಾಗಿ ಇಲ್ಲಿ ನೋಡಿ.
ಬೇಕಾಗುವ ಸಾಮಗ್ರಿಗಳು:
 
ಅಕ್ಕಿ - 11/2 ಕಪ್
ಅವಲಕ್ಕಿ - 1/2 ಕಪ್
ಉದ್ದಿನಬೇಳೆ - 1/2 ಕಪ್
ಕಡಲೆ ಬೇಳೆ - 5 ಚಮಚ
ತೊಗರಿ ಬೇಳೆ - 2 ಚಮಚ
ಮೆಂತೆ - 1 ಚಮಚ
ಸಾಸಿವೆ - 1 ಚಮಚ
ಎಣ್ಣೆ - ಸ್ವಲ್ಪ
ಬೆಣ್ಣೆ - ಸ್ವಲ್ಪ
ಜೀರಿಗೆ - 1 ಚಮಚ
ಇಂಗು - ಚಿಟಿಕೆ
ಕೆಂಪು ಮೆಣಸು - 5
ಕರಿಬೇವು - ಸ್ವಲ್ಪ
ಈರುಳ್ಳಿ - 1
ಹಸಿಮೆಣಸು - 1
ಶುಂಠಿ - 1 ಇಂಚು
ಬೆಳ್ಳುಳ್ಳಿ - 4 ಎಸಳು
ಅರಿಶಿಣ - 1 ಚಮಚ
ಉಪ್ಪು - ರುಚಿಗೆ
ಬಟಾಟೆ - 2
ಕೊತ್ತಂಬರಿ ಸೊಪ್ಪು - ಸ್ವಲ್ಪ
ನಿಂಬೆ ರಸ - 1/2 ಚಮಚ
 
ಮಾಡುವ ವಿಧಾನ:
 
ಒಂದು ಪಾತ್ರೆಯಲ್ಲಿ 11/2 ಕಪ್ ಅಕ್ಕಿ, 1/2 ಕಪ್ ಉದ್ದಿನಬೇಳೆ, 2 ಚಮಚ ಕಡಲೆ ಬೇಳೆ, 2 ಚಮಚ ತೊಗರಿ ಬೇಳೆ, 1 ಚಮಚ ಮೆಂತೆ, 1/2 ಕಪ್ ನೆನೆಸಿಟ್ಟ ಅವಲಕ್ಕಿ ಮತ್ತು ನೀರನ್ನು ಸೇರಿಸಿ 4-6 ಗಂಟೆಗಳಕಾಲ ನೆನೆಸಿಡಿ. ನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ಅಗತ್ಯವಿರುವಷ್ಟು ನೀರನ್ನು ಸೇರಿಸಿ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಂಡು 8 ಗಂಟೆ ಮುಚ್ಚಿಡಿ.
 
ಒಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಸಾಸಿವೆ, ಜೀರಿಗೆ, 1/2 ಚಮಚ ಕಡಲೆ ಬೇಳೆ, 1/2 ಚಮಚ ಉದ್ದಿನ ಬೇಳೆ, ಸ್ವಲ್ಪ ಕರಿಬೇವು, ಒಂದು ಕೆಂಪು ಮೆಣಸು ಮತ್ತು ಚಿಟಿಕೆ ಇಂಗನ್ನು ಸೇರಿಸಿ 1 ನಿಮಿಷ ಹುರಿದು ಹೆಚ್ಚಿದ ಈರುಳ್ಳಿ, ಹಸಿಮೆಣಸು ಮತ್ತು 1/2 ಇಂಚು ಶುಂಠಿಯನ್ನು ಸೇರಿಸಿ ಇನ್ನೊಮ್ಮೆ ಹುರಿಯಿರಿ. ಈರುಳ್ಳಿ ಹುರಿದು ಕೆಂಪಾದಾಗ ಅದಕ್ಕೆ 1/2 ಚಮಚ ಅರಿಶಿಣ ಮತ್ತು ಉಪ್ಪನ್ನು ಸೇರಿಸಿ ಇನ್ನೊಮ್ಮೆ ಮಿಕ್ಸ್ ಮಾಡಿ. ಈಗ ಇದಕ್ಕೆ ಬೇಯಿಸಿ ಸ್ಮ್ಯಾಶ್ ಮಾಡಿದ ಬಟಾಟೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟೌ ಆಫ್ ಮಾಡಿ. ನಂತರ ಈ ಮಿಶ್ರಣಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು 1/2 ಚಮಚ ನಿಂಬೆರಸವನ್ನು ಸೇರಿಸಿಟ್ಟುಕೊಳ್ಳಿ.
 
ಈಗ ಇನ್ನೊಂದು ತವಾ ತೆಗೆದುಕೊಂಡು ಅದರಲ್ಲಿ 2 ಚಮಚ ಎಣ್ಣೆ ಮತ್ತು 2 ಚಮಚ ಕಡಲೆ ಬೇಳೆಯನ್ನು ಹಾಕಿ 2 ನಿಮಿಷ ಹುರಿಯಿರಿ. ಈಗ ಅದಕ್ಕೆ 1/2 ಇಂಚು ಶುಂಠಿ, 4 ಎಸಳು ಬೆಳ್ಳುಳ್ಳಿ, ಮತ್ತು ಚೆನ್ನಾಗಿ ಹೆಚ್ಚಿದ 1/2 ಈರುಳ್ಳಯನ್ನು ಸೇರಿಸಿ 1 ನಿಮಿಷ ಹುರಿದು ಅದಕ್ಕೆ 1/2 ಚಮಚ ಅರಿಶಿಣ ಮತ್ತು 4 ಕೆಂಪು ಮೆಣಸನ್ನು ಸೇರಿಸಿ 2 ನಿಮಿಷ ಹುರಿದು ಸ್ಟೌ ಆಫ್ ಮಾಡಿ. ಈ ಹುರಿದ ಮಸಾಲೆಯು ತಣ್ಣಗಾದಮೇಲೆ ಮಿಕ್ಸಿ ಜಾರ್‌ನಲ್ಲಿ ಹಾಕಿ ಸ್ವಲ್ಪ ನೀರು ಮತ್ತು ಉಪ್ಪನ್ನು ಸೇರಿಸಿ ರುಬ್ಬಿಕೊಂಡರೆ ಕೆಂಪು ಚಟ್ನಿ ರೆಡಿಯಾಗುತ್ತದೆ.
 
ಈಗ ದೋಸೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ದೋಸೆ ತವಾದ ಮೇಲೆ ಒಂದು ಹುಟ್ಟು ಹಿಟ್ಟನ್ನು ಹಾಕಿ ಹರಡಿ ಮಧ್ಯಮ ಉರಿಯಲ್ಲಿ ಬೇಯಿಸಿ. ಈ ದೋಸೆಯ ಮೇಲೆ ಒಂದು ಚಮಚ ಬೆಣ್ಣೆ ಮತ್ತು 1 ಚಮಚ ಕೆಂಪು ಚಟ್ನಿಯನ್ನು ಹಾಕಿ ಅದನ್ನು ಹರಡಿ. ಅದರ ಮೇಲೆ ಈಗಾಗಲೇ ಮಾಡಿಟ್ಟುಕೊಂಡಿರುವ ಮಸಾಲಾವನ್ನು ಹಾಕಿ ಫೋಲ್ಡ್ ಮಾಡಿದರೆ ಮೈಸೂರು ಮಸಾಲಾ ದೋಸಾ ಸಿದ್ಧವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡುವುದನ್ನು ಅವಾಯ್ಡ್ ಮಾಡಿ

ಕಾಡುವ ತಲೆನೋವಿಗೆ ತಕ್ಷಣದ ಉಪಶಮನಕ್ಕಾಗಿ ಈ ರೀತಿ ಮಾಡಿ

ಚಿಕ್ಕ ಗಾಯಗಳೂ ಬೇಗ ಗುಣವಾಗುತ್ತಿಲ್ಲ ಎಂದರೆ ಕಾರಣವೇನು ಗೊತ್ತಾ

ಬೀಸಿಲಿನ ಝಳಕ್ಕೆ ಬೇರೆಲ್ಲ ಪಾನೀಯ ಕುಡಿಯುವ ಬದಲು ಇದನ್ನೊಮ್ಮೆ ಟ್ರೈ ಮಾಡಿ

ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಿ, ಪರಿಣಾಮ ನೋಡಿ

ಮುಂದಿನ ಸುದ್ದಿ
Show comments