ಬೆಂಗಳೂರು: ಸಾಮಾನ್ಯವಾಗಿ ಚಹಾ ತಯಾರಿಸುವಾಗ ಹಾಲು ಸೇರಿಸಲು ಮರೆಯುವುದೇ ಇಲ್ಲ. ಆದರೆ ಚಹಾಕ್ಕೆ ಹಾಲು ಸೇರಿವುದು ಆರೋಗ್ಯದ ದೃಷ್ಟಿಯಿಂದ ಉತ್ತಮವೇ?
ಆಹಾರ ತಜ್ಞರ ಪ್ರಕಾರ ಚಹಾಕ್ಕೆ ಹಾಲು ಸೇರಿಸಲೇಬಾರದಂತೆ. ಬ್ಲ್ಯಾಕ್ ಟೀ ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ. ಚಹಾಕ್ಕೆ ಹಾಲು ಸೇರಿಸುವುದರಿಂದ ಅದು ಅಸಿಡಿಕ್ ಆಗಿ ಬದಲಾಗುತ್ತದಂತೆ.
ಚಹಾದಲ್ಲಿ ಆಂಟಿ ಆಕ್ಸಿಡೆಂಟ್ ಅಂಶವಿರುತ್ತದೆ. ಒಂದು ವೇಲೆ ಇದಕ್ಕೆ ಹಾಲು ಸೇರಿಸಿದ್ದೇ ಆದರೆ ಅಸಿಡಿಟಿಗೆ ಕಾರಣವಾಗುತ್ತದೆ. ಅದರ ಮೇಲೆ ಸಕ್ಕರೆಯೂ ಸೇರಿಸಿದರೆ ಅದು ಮತ್ತಷ್ಟು ಹಾಳಾಗುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಹಾಗಾಗಿ ಆರೋಗ್ಯಕರವಾಗಿರಬೇಕಾದರೆ ಚಹಾವನ್ನು ಸಕ್ಕರೆ, ಹಾಲು ಬಳಸದೇ ಸೇವಿಸುವುದು ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ