ಬೆಂಗಳೂರು: ಒಂದು ಹೊತ್ತಿನ ಊಟವಿಲ್ಲದಿದ್ದರೂ ಸರಿಯೇ. ಮೊಬೈಲ್ ಇಲ್ಲದೇ ನಡೆಯದು ಎನ್ನುವ ಕಾಲವಿದು. ಅಂತಹದ್ದರಲ್ಲಿ ಪಕ್ಕದಲ್ಲೇ ಮೊಬೈಲ್ ಇಟ್ಟುಕೊಂಡು ಮಲಗುವವರಿಗೆ ಶಾಕಿಂಗ್ ಸುದ್ದಿ ಬಂದಿದೆ.
ಹೊಸ ಅಧ್ಯಯನವೊಂದರ ಪ್ರಕಾರ ರಾತ್ರಿ ವೇಳೆ ಮಲಗುವಾಗ ಹಾಸಿಗೆ ಪಕ್ಕವೇ ಮೊಬೈಲ್ ಇಟ್ಟುಕೊಂಡು ಮಲಗುವುದರಿಂದ ಮೆದುಳು ಕ್ಯಾನ್ಸರ್ ಬರುವ ಅಪಾಯವಿದೆಯಂತೆ!
ಮೊಬೈಲ್ ನಿಂದ ಹೊರ ಸೂಸುವ ರೇಡಿಯೋ ತರಂಗಗಳು ಮೆದುಳಿನ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ಅಧ್ಯಯನಕಾರರು ಹೇಳಿದ್ದಾರೆ. ಅಷ್ಟೇ ಅಲ್ಲ, ವೀರ್ಯಾಣು ಸಂಖ್ಯೆ ಕಡಿಮೆಯಾಗುವುದು ಅಥವಾ ಫಲವಂತಿಕೆ ಕಡಿಮೆಯಾಗುವುದಕ್ಕೂ ನಿಮ್ಮ ಈ ಅಭ್ಯಾಸ ಕಾರಣವಾಗಬಹುದು ಎಂದು ಅಧ್ಯಯನಕಾರರು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ