ತಯಾರಿಸಲು ಬೇಕಾಗುವ ಸಾಮಗ್ರಿಗಳು :
* ಅಕ್ಕಿ 1 ಕಪ್
* ಹೆಸರುಬೇಳೆ 1/2 ಕಪ್
* ತುಪ್ಪ 2 ಟೀ ಚಮಚ
* ಪಲಾವ್ ಎಲೆ
* ಏಲಕ್ಕಿ 2
* ಚಕ್ಕೆ ಒಂದಿಂಚು
* ಲವಂಗ 2
* ಜೀರಿಗೆ 1 ಟೀ ಚಮಚ
* ಚಿಟಿಕೆಯಷ್ಟು ಇಂಗು
* ಈರುಳ್ಳಿ 1
* ಹಸಿಮೆಣಸಿನಕಾಯಿ 1
* ಬಟಾಣಿ 1/2 ಕಪ್
* ಬೆಳ್ಳುಳ್ಳಿ ಶುಂಠಿ ಪೇಸ್ಟ್ 1 ಟೀ ಚಮಚ
* ಟೊಮೆಟೊ 2
* ಕ್ಯಾರೆಟ್ 1
* ಕ್ಯಾಪ್ಸಿಕಂ 1
* ಅರಿಶಿನ ಪುಡಿ 1/4 ಚಮಚ
* ಖಾರದ ಪುಡಿ 1/2 ಟೀ ಚಮಚ
* ಗರಂ ಮಸಾಲೆ 1/2 ಟೀ ಚಮಚ
* ಕರಿಬೇವಿನ ಎಲೆ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು
* ನೀರು 5 ಕಪ್
* ಉಪ್ಪು ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ :
ಮೊದಲು ಕುಕ್ಕರಿನಲ್ಲಿ ತುಪ್ವವನ್ನು ಹಾಕಿ ಬಿಸಿ ಮಾಡಿಟ್ಟುಕೊಳ್ಳಬೇಕು. ನಂತರ ಅದಕ್ಕೆ ಪಲಾವ್ ಎಲೆ, ಏಲಕ್ಕಿ, ಲವಂಗ, ಚಕ್ಕೆ. ಜೀರಿಗೆಯನ್ನು ಹಾಕಬೇಕು. ನಂತರ ಅದನ್ನು ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿಕೊಳ್ಳಬೇಕು. ನಂತರ ಅದಕ್ಕೆ ಟೊಮೆಟೊವನ್ನು ಹಾಕಬೇಕು. ನಂತರ ತರಕಾರಿಗಳನ್ನು ಒಂದೇ ತರಹ ಕತ್ತರಿಸಿಕೊಂಡು ಇದಕ್ಕೆ ಸೇರಿಸಬೇಕು. ನಂತರ ಕರಿಬೇವು, ಕೊತ್ತಂಬರಿ ಸೊಪ್ಪು. ಅರಿಶಿನ. ಖಾರದ ಪುಡಿ ಮತ್ತು ಗರಂ ಮಸಾಲೆ ಹಾಕಿ ಮಿಶ್ರಣ ಮಾಡಬೇಕು. ಅದಕ್ಕೆ ಅಕ್ಕಿ ಮತ್ತು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ಮಿಶ್ರಣ ಮಾಡಬೇಕು. ನಂತರ ನೀರು ಮತ್ತು ಉಪ್ಪನ್ನು ಹಾಕಿ ಕುಕ್ಕರ್ ಮುಚ್ಚಳವನ್ನು ಮುಚ್ಚಬೇಕು. ಕುಕ್ಕರ್ 5 ವಿಷಿಲ್ ಹಾಕಿದ ನಂತರ ಒಲೆಯನ್ನು ಆರಿಸಿದರೆ ರುಚಿಯಾದ ಮಸಾಲಾ ಕಿಚಡಿ ಸವಿಯಲು ಸಿದ್ಧ.