ಬೇಕಾಗುವ ಸಾಮಗ್ರಿಗಳು -
1 ಕಪ್ ಪೇಪರ್ ಅವಲಕ್ಕಿ
1 ಹೆಚ್ಚಿದ ಈರುಳ್ಳಿ
ಬೇಯಿಸಿ ಹೆಚ್ಚಿದ 1 ಆಲೂಗಡ್ಡೆ
1/2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
1 ಹೆಚ್ಚಿದ ಹಸಿಮೆಣಸು
2 ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
ಕರಿಬೇವಿನ ಎಲೆ
ಖಾರ ಪುಡಿ - 1/2 ಚಮಚ
ಓಂ ಕಾಳು - 1/4 ಚಮಚ
ಆಮ್ ಚೂರ್ ಪುಡಿ - 1/2 ಚಮಚ
ಉಪ್ಪು
ಹುರಿದು ಪುಡಿಮಾಡಿದ ಕಡಲೆಕಾಳು (ಶೇಂಗಾ) - 2-3 ಚಮಚ
ಕಡಿಲೆ ಹಿಟ್ಟು - 3 ಚಮಚ
ಮಾಡುವ ವಿಧಾನ -
* ಅವಲಕ್ಕಿಯನ್ನು ತೊಳೆದು, ನೀರನ್ನು ತೆಗೆದುಹಾಕಿ.
* ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಬೇಯಿಸಿ ಹೆಚ್ಚಿದ ಆಲೂಗಡ್ಡೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಹಸಿಮೆಣಸು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವಿನ ಎಲೆ, ಖಾರ ಪುಡಿ, ಓಂ ಕಾಳು, ಆಮ್ ಚೂರ್ ಪುಡಿ, ಉಪ್ಪು, ಕಡಲೆಕಾಳು, ಕಡಿಲೆ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ನಂತರ ಅದನ್ನು ಉಂಡೆ ಆಕಾರಕ್ಕೆ ಕಟ್ಟಿ ಎಣ್ಣೆಯಲ್ಲಿ ಹಾಕಿ ಹುರಿದರೆ, ಆರೋಗ್ಯಕರ ಅವಲಕ್ಕಿ ಪಕೋಡ ಸವಿಯಲು ಸಿದ್ಧ.