ಬೇಸಿಗೆಯ ಬಿಸಿಲಿನ ಧಗೆಯಲ್ಲಿ ನಮ್ಮ ದೇಹಕ್ಕೆ ತಂಪಿನ ಅಗತ್ಯವಿರುತ್ತದೆ. ಆದ್ದರಿಂದ ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುವ ಅಗತ್ಯವಿರುತ್ತದೆ. ದೃವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದರೆ ಆರೋಗ್ಯಕ್ಕೂ ಉತ್ತಮ.
ಮೊಸರಿನಿಂದ ಮಾಡುವ ಈ ಪದಾರ್ಥ ನಿಮ್ಮ ದೇಹವನ್ನು ತಂಪಾಗಿಡಲು ಸಹಾಯಮಾಡುತ್ತದೆ ಮತ್ತು ತರಕಾರಿಗಳು ಹಲವು ಪೋಷ್ಟಿಕಾಂಶಗಳನ್ನು ಒದಗಿಸುತ್ತವೆ. ಮೊಸರು ಬಜ್ಜಿಯನ್ನು ಮಾಡುವುದು ಹೇಗೆ ಎಂದು ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ಓದಿ.
1. ಟೊಮೆಟೋ ಮತ್ತು ಸೌತೆಕಾಯಿ ಮೊಸರು ಬಜ್ಜಿ
ಬೇಕಾಗುವ ಸಾಮಗ್ರಿಗಳು:
ಟೊಮೆಟೋ - 1
ಸೌತೆಕಾಯಿ - 1/2
ಈರುಳ್ಳಿ - 1
ಮೊಸರು - 1 ಕಪ್
ಹಸಿಮೆಣಸು - 1
ಕೊತ್ತಂಬರಿ ಸೊಪ್ಪು - ಸ್ವಲ್ಪ
ಕೆಂಪು ಮೆಣಸು - 1
ಉದ್ದಿನಬೇಳೆ - 1 ಚಮಚ
ಸಾಸಿವೆ - 1 ಚಮಚ
ಉಪ್ಪು - ರುಚಿಗೆ
ಎಣ್ಣೆ - 1 ಚಮಚ
ಮಾಡುವ ವಿಧಾನ:
ಟೊಮೆಟೋ, ಸೌತೆಕಾಯಿ, ಈರುಳ್ಳಿ, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಹೆಚ್ಚಿದ ತರಕಾರಿಗಳನ್ನು ಒಂದು ಬೌಲ್‌ನಲ್ಲಿ ಹಾಕಿ ಅದಕ್ಕೆ ಮೊಸರು ಮತ್ತು ರುಚಿಗೆತಕ್ಕಷ್ಟು ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ. ಅಗತ್ಯವೆನಿಸಿದರೆ 1/4 ಕಪ್ ನೀರನ್ನು ಸೇರಿಸಿ.
ಒಂದು ಪ್ಯಾನ್‌ನಲ್ಲಿ ಎಣ್ಣೆಯನ್ನು ಹಾಕಿ ಅದು ಕಾದ ನಂತರ ಉದ್ದಿನಬೇಳೆ, ಸಾಸಿವೆ ಮತ್ತು ಮೆಣಸನ್ನು ಹಾಕಿ ಒಗ್ಗರಣೆಯನ್ನು ರೆಡಿಮಾಡಿ ಅದನ್ನು ಮೇಲಿನ ಮಿಶ್ರಣಕ್ಕೆ ಹಾಕಿದರೆ ಟೊಮೆಟೋ ಮೊಸರು ಬಜ್ಜಿ ರೆಡಿ.
2. ಬಸಳೆ ಸೊಪ್ಪು ಮೊಸರು ಬಜ್ಜಿ
ಬೇಕಾಗುವ ಸಾಮಗ್ರಿಗಳು:
ಬಸಳೆ ಸೊಪ್ಪು - 1 ಕಟ್ಟು
ಈರುಳ್ಳಿ - 1
ಕಾಯಿತುರಿ - 1/2 ಕಪ್
ಮೊಸರು - 1 ಕಪ್
ಹಸಿಮೆಣಸು - 1
ಉದ್ದಿನಬೇಳೆ - 1 ಚಮಚ
ಸಾಸಿವೆ - 1 ಚಮಚ
ಕೆಂಪು ಮೆಣಸು - 2
ಎಣ್ಣೆ - 1 ಚಮಚ
ಹುಣಿಸೆ ರಸ - 1/4 ಚಮಚ
ಮಾಡುವ ವಿಧಾನ:
ಎಳೆಯ ಬಸಳೆಸೊಪ್ಪಿನ ಕಟ್ಟನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಹೆಚ್ಚಿ. ಹೆಚ್ಚಿದ ಸೊಪ್ಪಿಗೆ 1 ಕಪ್ ನೀರನ್ನು ಸೇರಿಸಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಬೇಯಿಸಿ. ಸ್ವಲ್ಪ ನೀರನ್ನು ಸೇರಿಸಿ ಕಾಯಿತುರಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಬೇಯಿಸಿದ ಸೊಪ್ಪು ತಣ್ಣಗಾದಮೇಲೆ ಅದಕ್ಕೆ ರುಬ್ಬಿದ ಕಾಯಿತುರಿ, ಹೆಚ್ಚಿದ ಈರುಳ್ಳಿ, ಹಸಿಮೆಣಸು ಮತ್ತು ಮೊಸರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಒಂದು ಪ್ಯಾನ್‌ನಲ್ಲಿ 1 ಚಮಚ ಎಣ್ಣೆಯನ್ನು ಹಾಕಿ ಅದು ಕಾದ ನಂತರ ಉದ್ದಿನಬೇಳೆ, ಸಾಸಿವೆ ಮತ್ತು ಮೆಣಸನ್ನು ಹಾಕಿ ಒಗ್ಗರಣೆಯನ್ನು ರೆಡಿಮಾಡಿ ಅದನ್ನು ಮೇಲಿನ ಮಿಶ್ರಣಕ್ಕೆ ಹಾಕಿದರೆ ಬಸಳೆ ಸೊಪ್ಪಿನ ಮೊಸರು ಬಜ್ಜಿ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.