ಬೇಕಾಗುವ ಪದಾರ್ಥಗಳು
ಬೋನ್ ಲೆಸ್ ಚಿಕನ್ - ಅರ್ಧ ಕೆಜಿ
ಕಾರ್ನ್ ಫ್ಲೋರ್ (ಮೆಕ್ಕೆಜೋಳದ ಹಿಟ್ಟು) - 5 ಚಮಚ
ಮೈದಾ ಹಿಟ್ಟು - 5 ಚಮಚ
ಮೊಟ್ಟೆ - 2
ಸೋಯಾ ಸಾಸ್ - 2 ಚಮಚ
ಚಿಲ್ಲಿ ಸಾಸ್ - 2 ಚಮಚ
ಸಾಸಿವೆ ಪುಡಿ - 1 ಚಮಚ
ಕಾಳು ಮೆಣಸಿನ ಪುಡಿ - 1/4 ಚಮಚ
ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 2 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಅಜಿನೋಮೋಟೋ - ಚಿಟಿಕೆಯಷ್ಟು
ಮಾಡುವ ವಿಧಾನ
- ಕೋಳಿ ಮಾಂಸವನ್ನು ಚಿಕ್ಕದಾಗಿ ಕತ್ತರಿಸಿ ಅದನ್ನು ಚೆನ್ನಾಗಿ ತೊಳೆದು ಪಾತ್ರೆಯೊಂದಕ್ಕೆ ಹಾಕಿ.
- ಪ್ರೆಷರ್ ಕುಕ್ಕರ್ ತೆಗೆದುಕೊಂದು ಅದಕ್ಕೆ ಸ್ವಲ್ಫ ಮಾಂಸವನ್ನು ಹಾಗಿ ಮಧ್ಯಮಗಾತ್ರದ ಲೋಟದಲ್ಲಿ 2-3 ಲೋಟ ನೀರು, ಎಣ್ಣೆ, ಅಜಿನೋಮೋಟೋ, ಬೆಳ್ಳುಳ್ಳಿ, ಉಪ್ಪು, ಕಾಳುಮೆಣಸಿನ ಪುಡಿ ಹಾಕಿ 4 ಕೂಗು ಕೂಗಿಸಿ.
- ನಂತರ ಬೆಂದ ಮಾಂಸವನ್ನು ತೆಗೆದು ನೀರು ಹೋಗುವಂತೆ ಮಾಡಿ.
- ಪಾತ್ರೆಯೊಂದರನ್ನು ತೆಗೆದುಕೊಂಡು ಅದಕ್ಕೆ ಮೈದಾಹಿಟ್ಟು, ಕಾರ್ನ್ ಫ್ಲೋರ್, ಮೊಟ್ಟೆ, ಸೋಯಾಸಾಸ್, ಚಿಲ್ಲಿ ಸಾಸ್, ಸಾಸಿವೆಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ಸ್ವಲ್ಪ ಗಟ್ಟಿಯಿರುವಂತೆಯೇ ಮಾಡಿಕೊಳ್ಭಿ. ಅಗತ್ಯಬಿದ್ದರೆ, ಹಾಲು ಸೇರಿಸಬಹುದು.
- ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆಯನ್ನು ಕಾಯಲು ಬಿಡಬೇಕು. ಎಣ್ಣೆ ಕಾದ ನಂತರ ಬೇಯಿಸಿದ ಮಾಂಸದ ಚೂರುಗಳನ್ನು ಮಿಶ್ರಣದಲ್ಲಿ ಅದ್ದಿಸಿ ಎಣ್ಣೆಗೆ ಹಾಕಿ ಕೆಂಪಗೆ ಕರಿದುಕೊಂಡರೆ ರುಚಿಕರವಾದ ಕ್ರಿಸ್ಪಿ ಚಿಕನ್ ಪಕೋಡಾ ಸವಿಯಲು ಸಿದ್ಧ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.