Webdunia - Bharat's app for daily news and videos

Install App

ಜೋಳದ ಕಡುಬು

Webdunia
ಗುರುವಾರ, 11 ಅಕ್ಟೋಬರ್ 2018 (15:08 IST)
ತಯಾರಿಸಲು ಬೇಕಾಗುವ ಸಾಮಗ್ರಿಗಳು :
 
ಈರುಳ್ಳಿ
1 ಟೊಮೆಟೊ
1 ಕಟ್ಟು ಮೆಂತೆ ಸೊಪ್ಪು
1/2 ಕಪ್ ತೊಗರಿಬೇಳೆ
1 ಕಪ್ ಜೋಳದ ಹಿಟ್ಟು
ಒಂದೂವರೆ ಕಪ್ ನೀರು
ಚಿಟಿಕೆ ಉಪ್ಪು
4 ಚಮಚ ಎಣ್ಣೆ
ಸಾಸಿವೆ
ಜೀರಿಗೆ
ಕರಿಬೇವು
ಕೊತ್ತಂಬರಿ ಸೊಪ್ಪು
ಚಿಟಿಕೆಯಷ್ಟು ಇಂಗು
ಅಚ್ಚ ಖಾರದ ಪುಡಿ
ಮೆಂತೆ ಸೊಪ್ಪು
ಗರಂ ಮಸಾಲಾ
 
ತಯಾರಿಸುವ ವಿಧಾನ :
ಮೊದಲು 1 ಈರುಳ್ಳಿ 1 ಟೊಮೆಟೊವನ್ನು ಸಣ್ಣದಾಗಿ ಕಟ್ ಮಾಡಿ ಒಂದು ಕಟ್ ಮೆಂತೆ ಸೊಪ್ಪನ್ನು ಬಿಡಿಸಿ ಚೆನ್ನಾಗಿ ತೊಳೆದು ಇಟ್ಟುಕೊಳ್ಳಬೇಕು. ನಂತರ 1/2 ಕಪ್ ತೊಗರಿಬೇಳೆಯನ್ನು ಬೇಯಿಸಬೇಕು. ನಂತರ 1 ಕಪ್ ಜೋಳದ ಹಿಟ್ಟಿಗೆ ಒಂದೂವರೆ ಕಪ್‌ನಷ್ಟು ನೀರನ್ನು ಹಾಕಿ ಕುದಿಯಲು ಇಡಬೇಕು. ನಂತರ 1 ಚಿಟಿಕೆಯಷ್ಟು ಉಪ್ಪನ್ನು ಹಾಕಿ ನೀರು ಕುದಿ ಬಂದ ನಂತರ ಜೋಳದ ಹಿಟ್ಟನ್ನು ಹಾಕಿ ಹಾಗೆಯೇ ಕುದಿಯಲು ಬಿಡಬೇಕು. ನಂತರ 5 ನಿಮಿಷದ ನಂತರ ಹಿಟ್ಟನ್ನು ಮುದ್ದೆ ತರಹ ತಿರುವಿ ಆರಲು ಬಿಡಬೇಕು. ಅದು ಆರಿದ ನಂತರ ಮುದ್ದೆಯನ್ನು ಚೆನ್ನಾಗಿ ನಾದಬೇಕು. ನಂತರ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಪೇಡೆಯ ಆಕಾರದಲ್ಲಿ ಒತ್ತಬೇಕು. ನಂತರ ಒಂದು ಪಾತ್ರೆಗೆ 4 ಚಮಚ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಕೊತ್ತಂಬರಿ ಸೊಪ್ಪು, ಚಿಟಿಕೆ ಇಂಗು, ಸಮ್ಣಗೆ ಕಟ್ ಮಾಡಿರುವ ಈರುಳ್ಳಿ, ಟೊಮೆಟೊ, ಮೆಂತೆ ಸೊಪ್ಪು ಹಾಕಿ ಸ್ವಲ್ಪ ಬಾಡಿಸಿ ಅಚ್ಚಖಾರದ ಪುಡಿ, ಗರಂ ಮಸಾಲಾ, ಉಪ್ಪು ಮತ್ತು ಬೇಯಿಸಿದ ತೊಗರಿಬೇಳೆ ಹಾಕಿ ಅದಕ್ಕೆ ಒಂದೂವರೆ ಕಪ್‍ನಷ್ಟು ನೀರನ್ನು ಹಾಕಿ ಕುದಿಯಲು ಇಡಬೇಕು. ನಂತರ ಈಗಾಗಲೇ ಮಾಡಿಟ್ಟ ಉಂಡೆಗಳನ್ನು ಹಾಕಿ 10 ನಿಮಿಷ ಬೇಯಿಸಿ ಅದರ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಜೋಳದ ಕಡುಬು ತಿನ್ನಲು ರೆಡಿ. ಈ ಕಡುಬಿಗೆ ಸ್ವಲ್ಪ ತುಪ್ಪ ಹಾಕಿಕೊಂಡು ತಿಂದರೆ ತುಂಬಾ ರುಚಿಯಾಗಿರುತ್ತದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments