ಬೆಂಗಳೂರು: ಸಾಮಾನ್ಯವಾಗಿ ಹಲಸಿನ ಬೀಜವನ್ನು ಪಲ್ಯವೋ, ಸಾಂಬಾರ್ ಮಾಡಲೋ ಬಳಸುವುದು ಬಿಟ್ಟರೆ ಹೆಚ್ಚು ಉಪಯೋಗ ಮಾಡಲ್ಲ. ಆದರೆ ಹಲಸಿನ ಬೀಜದ ಮಿಲ್ಕ್ ಶೇಕ್ ಮಾಡಿ ಕುಡಿದರೆ ಎಷ್ಟು ರುಚಿಯಾಗಿರುತ್ತದೆ ಗೊತ್ತಾ? ಮಾಡಿ ನೋಡಿ.
ಬೇಕಾಗಿರುವ ಸಾಮಗ್ರಿಗಳು
10 ಹಲಸಿನ ಬೀಜ
ಸಕ್ಕರೆ ಅಥವಾ ಬೆಲ್ಲ
ಹಾಲು
ಏಲಕ್ಕಿ
ಮಾಡುವ ವಿಧಾನ
ಹಲಸಿನ ಬೀಜವನ್ನು ಹೊರಗಿನ ಸಿಪ್ಪೆ ತೆಗೆದು ಚೆನ್ನಾಗಿ ಬೇಯಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಹಾಲು, ಬೆಲ್ಲ, ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬೇಕಿದ್ದರೆ ನೀರು ಸೇರಿಸಿಕೊಳ್ಳಬಹುದು. ಇದನ್ನು ಕೆಲವು ಕಾಲ ಫ್ರಿಡ್ಜ್ ನಲ್ಲಿರಿಸಿ ತಂಪಾಗಿಸಿ ಕುಡಿದು ನೋಡಿ. ಎಷ್ಟು ರುಚಿಯಾಗಿರುತ್ತದೆಂದು.. ಮಾಡಿ ನೋಡಿ. ಸುಮಾರು 10 ಹಲಸಿನ ಬೀಜವಿದ್ದರೆ ಎರಡರಿಂದ ಮೂರು ಲೋಟ ಮಿಲ್ಕ್ ಶೇಕ್ ಮಾಡಿಕೊಳ್ಳಬಹುದು.