Webdunia - Bharat's app for daily news and videos

Install App

ಉಳಿದಿರುವ ಆಹಾರ ಪದಾರ್ಥದಿಂದ ಸ್ವಾದಿಷ್ಟ ಅಡುಗೆ ಮಾಡೋದು ಹೇಗೆ ಗೊತ್ತಾ?

athita
ಬುಧವಾರ, 13 ಡಿಸೆಂಬರ್ 2017 (14:29 IST)
ನೀವು ಉಳಿದಿರುವ ಆಹಾರ ಪದಾರ್ಥದಿಂದ ಹೊಸದೇನಾದರೂ ಮಾಡಲು ಬಯಸಿದ್ದೀರಾ? ನಿಮಗಾಗಿ ಉಳಿದಿರುವ ಆಹಾರ ಪದಾರ್ಥವನ್ನು ಬಳಸಿಕೊಂಡು ರುಚಿ ರುಚಿಯಾದ ಸ್ವಾದಿಷ್ಟ ಅಡುಗೆಗಳನ್ನು ತಯಾರಿಸೋದು ಹೇಗೆ ಅಂತಾ ನಾವು ತಿಳಿಸಿಕೊಡ್ತಿವಿ
 
1.ಇಡ್ಲಿ ಉಪ್ಪಿಟ್ಟು-

ಬೇಕಾಗುವ ಸಾಮಗ್ರಿ-
 
ಚಿಕ್ಕದಾಗಿ ತುಂಡು ಮಾಡಿದ ಇಡ್ಲಿ (10)
 
1 ಸಣ್ಣಗೆ ಹೆಚ್ಚಿದ ಈರುಳ್ಳಿ
1 ಸಣ್ಣಗೆ ಹೆಚ್ಚಿದ ಟೊಮೆಟೊ
2 ಟೇಬಲ್ ಚಮಚ ಕಡಲೆಬೇಳೆ
2 ಟೇಬಲ್ ಚಮಚ ಉದ್ದಿನಬೇಳೆ
ಕೊತ್ತಂಬರಿ ಸೊಪ್ಪು
ತೆಂಗಿನ ತುರಿ
ಲಿಂಬೆ ರಸ
ಹಸಿ ಮೆಣಸಿನ ಕಾಯಿ
ಉಪ್ಪು
ಸಕ್ಕರೆ
ಸಾಸಿವೆ
ಜೀರಿಗೆ
ಕರಿಬೇವಿನ ಸೊಪ್ಪು
ಎಣ್ಣೆ
 
ಮಾಡುವ ವಿಧಾನ-
 
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಕಡಲೆಬೇಳೆ, ಉದ್ದಿನಬೇಳೆ ಮತ್ತು ಹಸಿ ಮೆಣಸಿನಕಾಯಿಯನ್ನು ಸೇರಿಸಿ ಒಗ್ಗರಣೆ ಕೊಡಿ. ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಹೆಚ್ಚಿದ ಟೊಮೆಟೊ, ಉಪ್ಪು, ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಬಾಡಿಸಿ, ಚಿಕ್ಕದಾಗಿ ತುಂಡು ಮಾಡಿದ ಇಡ್ಲಿ ಹಾಕಿ ಹುರಿದು, ಅರ್ಧ ಲಿಂಬೆಯ ರಸ, ಸ್ವಲ್ಪ ತೆಂಗಿನ ತುರಿ, ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಬಾಡಿಸಿದರೆ ರುಚಿಯಾದ ಇಡ್ಲಿ ಉಪ್ಪಿಟ್ಟು ರೆಡಿ.
 
2.ಚಿತ್ರಾನ್ನ-

ಬೇಕಾಗುವ ಸಾಮಗ್ರಿ-
 
ಬಿಸಿ ಮಾಡಿದ ಉಳಿದಿರುವ ಅನ್ನ(1 ಕಪ್)
1 ಸಣ್ಣಗೆ ಹೆಚ್ಚಿದ ಈರುಳ್ಳಿ
1 ಸಣ್ಣಗೆ ಹೆಚ್ಚಿದ ಟೊಮೆಟೊ
2 ಟೇಬಲ್ ಚಮಚ ಕಡಲೆಬೇಳೆ
2 ಟೇಬಲ್ ಚಮಚ ಉದ್ದಿನಬೇಳೆ
ಕೊತ್ತಂಬರಿ ಸೊಪ್ಪು
ತೆಂಗಿನ ತುರಿ
ಲಿಂಬೆ ರಸ
ಹಸಿ ಮೆಣಸಿನ ಕಾಯಿ
ಉಪ್ಪು
ಅರಿಶಿನ
ಸಕ್ಕರೆ
ಸಾಸಿವೆ
ಜೀರಿಗೆ
ಕರಿಬೇವಿನ ಸೊಪ್ಪು
ಎಣ್ಣೆ
 
ಮಾಡುವ ವಿಧಾನ-
 
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಕಡಲೆಬೇಳೆ, ಉದ್ದಿನಬೇಳೆ ಮತ್ತು ಹಸಿ ಮೆಣಸಿನಕಾಯಿಯನ್ನು ಸೇರಿಸಿ ಒಗ್ಗರಣೆ ಕೊಡಿ. ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಹೆಚ್ಚಿದ ಟೊಮೆಟೊ, ಉಪ್ಪು, ಸ್ವಲ್ಪ ಸಕ್ಕರೆ,ಅರಿಶಿನ ಸೇರಿಸಿ ಚೆನ್ನಾಗಿ ಬಾಡಿಸಿ, ಬಿಸಿ ಮಾಡಿದ ಉಳಿದಿರುವ ಅನ್ನ ಹಾಕಿ ಬಾಡಿಸಿ, ಅರ್ಧ ಲಿಂಬೆಯ ರಸ, ಸ್ವಲ್ಪ ತೆಂಗಿನ ತುರಿ, ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬಾಡಿಸಿದರೆ ರುಚಿಯಾದ ಚಿತ್ರನ್ನ ಸವಿಯಲು ಸಿದ್ಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments