ಬೆಂಗಳೂರು: ಸಕ್ಕರೆಗೆ ಹೋಲಿಸಿದರೆ ಬೆಲ್ಲ ಹೆಚ್ಚು ಆರೋಗ್ಯಕರೆ ಎಂದು ಹೇಳಲಾಗುತ್ತದೆ. ಹಾಗಿದ್ದರೂ ಮಧುಮೇಹಿಗಳು ಬೆಲ್ಲ ತಿನ್ನಬಹುದೇ?
ಸಕ್ಕರೆ ಮತ್ತು ಬೆಲ್ಲ ಎರಡೂ ಕಬ್ಬು ಬಳಸಿ ಮಾಡುವ ಸಿಹಿ ಪದಾರ್ಥಗಳು. ಹಾಗಿದ್ದರೂ ಸಕ್ಕರೆಗೆ ಹೋಲಿಸಿದರೆ ಬೆಲ್ಲ ತುಂಬಾ ಸಂಸ್ಕರಿತ ಆಹಾರವಲ್ಲ. ಹಾಗಾಗಿ ಇದು ಆರೋಗ್ಯಕರವಾಗಿ ಕಾಣಬಹುದು.
ಹಾಗಿದ್ದರೂ ಮಧುಮೇಹಿಗಳಿಗೆ ಬೆಲ್ಲ ಸೇವಿಸಬಹುದಾದ ಆಹಾರವಲ್ಲ. ಬೆಲ್ಲದಲ್ಲಿ ಕಬ್ಬಿಣದಂಶ, ನಾರಿನಂಶ ಹೆಚ್ಚಿದ್ದರೂ ಮಧುಮೇಹಿಗಳಿಗೆ ಒಳ್ಳೆಯದಲ್ಲ. ಇದರಲ್ಲೂ 65 ರಿಂದ 85 ಶೇಕಡಾ ಸಕ್ಕರೆ ಅಂಶವಿರುವುದರಿಂದ ಮಧುಮೇಹಿಗಳು ಬೆಲ್ಲ ಸೇವಿಸದೇ ಇರುವುದೇ ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ