ಮಾಡುವ ವಿಧಾನ: ಮೊದಲಿಗೆ ಗೋರಿಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು, ಸಣ್ಣ ಸಣ್ಣ ತುಂಡುಗಳಾಗಿ ಮಾಡಿಕೊಂಡು, ಅದಕ್ಕೆ ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ, ಕೊಬ್ಬರಿ, ಕೊತ್ತಂಬರಿ ಬೀಜ. ಜೀರಿಗೆ ಎಲ್ಲವನ್ನೂ ಸೇರಿ ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಿ. ಬಾಣಲಿಯಲ್ಲಿ ಸಾಸಿವೆ ಒಗ್ಗರಣೆ ಮಾಡಿಕೊಂಡು ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳ ಮಿಶ್ರಣವನ್ನು ಹಾಕಿ ಜೊತೆಗೆ ಉಪ್ಪು ಸೇರಿಸಿ ಅಗತ್ಯವಿರುವಷ್ಟು ನೀರು ಬೆರಿಸಿ 10-15 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಬೇಕು. ಇದು ಪಲ್ಯದ ಹದಕ್ಕಿಂತಲೂ ಸ್ವಲ್ಪ ನೀರಾಗಿರಬೇಕು. ಹೀಗೆ ಮಾಡಿದ ಗೋರಿಕಾಯಿ ಪಚ್ಚಡಿಯು ಚಪಾತಿಗೆ ಹೇಳಿ ಮಾಡಿಸಿದ ಕಾಂಬಿನೇಷನ್. ಬಿಸಿ ಅನ್ನಕ್ಕೂ ಚೆನ್ನಾಗಿರುತ್ತದೆ.