ಹಾಗಲಕಾಯಿ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ತುಂಬಾ ಆರೋಗ್ಯಕಾರಿಯಾದ ತರಕಾರಿ. ಇದರಲ್ಲಿ ಹಲವಾರು ಆರೋಗ್ಯ ಗುಣಗಳಿವೆ. ಇದರಲ್ಲಿ ನಾವು ಸಾಮಾನ್ಯವಾಗಿ ಪಲ್ಯ, ಗೊಜ್ಜು ಮಾಡುತ್ತೇವೆ. ಆದರೆ ಮಕ್ಕಳು ಇದನ್ನು ತಿನ್ನಲು ಅಷ್ಟೊಂದು ಇಷ್ಟಪಡುವುದಿಲ್ಲ. ಅದಕ್ಕಾಗಿ ಇಂದಿನ ನವೀನ ಶೈಲಿಯಲ್ಲಿ ಅವರಿಗೆ ಇಷ್ಟವಾಗುವ ರೀತಿಯಲ್ಲಿ ತಯಾರಿಸಿದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.
ಬೇಕಾಗುವ ಪದಾರ್ಥಗಳು:
4-5 ಹಾಗಲಕಾಯಿ
ಈರುಳ್ಳಿ - 2
ಟೋಮೊಟೋ - 2
ಹಸಿಮೆಣಸಿನ ಕಾಯಿ- 2
ಅಚ್ಚಖಾರದ ಪುಡಿ
ಕಡಲೇಹಿಟ್ಟು- 2 ಟೀಸ್ಪೂನ್
ಗರಂಮಸಾಲಾ
ಬೆಲ್ಲದ ಗಾತ್ರದಷ್ಟು ಹುಣಸೆಹಣ್ಣು
ಮಾಡುವ ವಿಧಾನ: ಹಾಗಲಕಾಯಿಯನ್ನು ಸಣ್ಣ ಹೋಳುಗಳಾಗಿ ಹೆಚ್ಚಿಕೊಂಡು, ಅದನ್ನು ಹುಣಸೇ ಹಣ್ಣಿನ ಹುಳಿಯಲ್ಲಿ ಚೆನ್ನಾಗಿ ಫ್ರೈ ಮಾಡಬೇಕು. ಹೀಗೇ ಮಾಡುವುದರಿಂದ ಅದರಲ್ಲಿನ ಸ್ವಲ್ಪ ಕಹಿ ಅಂಶ ಕಡಿಮೆಯಾಗುತ್ತದೆ. ಮತ್ತೊಂದು ಬಾಣಲಿಯಲ್ಲಿ ಸಾಸಿವೆ, ಕಡಲೇಬಳೆ ಒಗ್ಗರಣೆಗೆ ಹಸಿಮೆಣಸಿನಕಾಯಿ, ಈರುಳ್ಳಿ ಮತ್ತು ಟೋಮೊಟೋವನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು, ಇದಕ್ಕೆ ಈಗಾಗಲೇ ಫ್ರೈ ಮಾಡಿಕೊಂಡ ಹಾಗಲಕಾಯಿಯನ್ನು ಹಾಕಿ ಮತ್ತೊಂದು ಬಾರಿ ಚೆನ್ನಾಗಿ ಫ್ರೈ ಮಾಡಬೇಕು. ಹೀಗೇ ಮಾಡಿದ ಮೇಲೆ ಅದಕ್ಕೆ ಉಪ್ಪು, ಅಚ್ಚಖಾರದ ಪುಡಿ, ಗರಂಮಸಾಲ ಹಾಗೂ ನೀರಿನಲ್ಲಿ ಕದಡಿಕೊಂಡ ಕಡಲೇಹಿಟ್ಟಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿದರೆ ಹಾಗಲಕಾಯಿಯ ಕುರ್ಮ ರೆಡಿ.