ಯಾವುದೇ ಹಬ್ಬ-ಹರಿದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಮಾಡುವುದು ಪಾಯಸವೇ. ವೈವಿಧ್ಯಮಯವಾದ ಪದಾರ್ಥಗಳಿಂದ ವಿಧ ವಿಧವಾದ ಪಾಯಸವನ್ನು ತಯಾರಿಸಿ ಸವಿಯಬಹುದು. ಅಂತಹ ದಿಡೀರ್ ಎಂದು ತಯಾರಿಸುವ ಪಾಯಸದಲ್ಲಿ ಕ್ಯಾರಮಲ್ ಪಾಯಸವೂ ಒಂದು.
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಹಾಲು ಅರ್ಧ ಲೀಟರ್
* ಅಕ್ಕಿ ಹಿಟ್ಟು 2 ಚಮಚ
* ಸಕ್ಕರೆ ಅರ್ಧ ಬಟ್ಟಲು
* ಸ್ವಲ್ಪ ಗೋಡಂಬಿ
* ಸ್ವಲ್ಪ ದ್ರಾಕ್ಷಿ
* ಸ್ವಲ್ಪ ಬಾದಾಮಿ
* ಸ್ವಲ್ಪ ಏಲಕ್ಕಿ
ತಯಾರಿಸುವ ವಿಧಾನ:
ಮೊದಲಿಗೆ ಅರ್ಧ ಲೀಟರ್ ಹಾಲನ್ನು ಚೆನ್ನಾಗಿ ಕಾಯಿಸಿ ಅದಕ್ಕೆ ಸಕ್ಕರೆಯನ್ನು ಹಾಕಿ ಆರಲು ಬಿಡಬೇಕು. ನಂತರ ಸ್ವಲ್ಪ ಹಾಲಿಗೆ 2 ಚಮಚ ಅಕ್ಕಿ ಹಿಟ್ಟನ್ನು ಹಾಕಿ ಸ್ವಲ್ಪ ನೀರು ಹಾಕಿ ಕಲೆಸಿಕೊಂಡು ಕುದಿಯುತ್ತಿರುವ ಹಾಲಿಗೆ ಹಾಕಿ ಮತ್ತೊಂದು 5 ನಿಮಿಷ ಕುದಿಸಬೇಕು. ನಂತರ ಒಂದು ಪಾತ್ರೆಯಲ್ಲಿ ಎರಡು ಚಮಚ ಸಕ್ಕರೆಯನ್ನು ಹಾಕಿ ಕ್ಯಾರಮಲ್ ಮಾಡಿಕೊಳ್ಳಬೇಕು.
ಅದರಲ್ಲಿ ಸಕ್ಕರೆಯು ಕರಗಿ ಸ್ವಲ್ಪ ಕಂದು ಬಣ್ಣ ಬಂದ ತಕ್ಷಣ, ಅದರಲ್ಲಿ ಅರ್ಧ ಬಟ್ಟಲು ಹಾಲನ್ನು ಹಾಕಿ ಕೈ ಆಡಿಸಿ ಕುದಿಯುತ್ತಿರುವ ಹಾಲಿನಲ್ಲಿ ಹಾಕಿ ಮತ್ತೊಮ್ಮೆ 5 ನಿಮಿಷ ಕೈ ಆಡಿಸಬೇಕು ನಂತರ ಅದಕ್ಕೆ ಗೋಡಂಬಿ, ದ್ರಾಕ್ಷಿ, ಬಾದಾಮಿ, ಏಲಕ್ಕಿಯನ್ನು ಹಾಕಬೇಕು ಈಗ ಕ್ಯಾರೆಮಲ್‌ನಲ್ಲಿ ಹಾಲು ಹಾಕಿದ ತಕ್ಷಣ ಸ್ವಲ್ಪ ಸ್ವಲ್ಪವೇ ನೊರೆ ಬರಲು ಪ್ರಾರಂಭವಾಗುತ್ತದೆ. ಸ್ವಲ್ಪ ಕುದಿಸಿದ ನಂತರ ರುಚಿಯಾದ ಕ್ಯಾರೆಮಲ್ ಪಾಯಸ ಸವಿಯಲು ಸಿದ್ಧ.