Publish Date: Mon, 08 Oct 2018 (14:07 IST)
Updated Date: Mon, 08 Oct 2018 (14:09 IST)
ಗ್ರೀನ್‌ಚಿಲ್ಲಿ ಬ್ರೆಡ್ ಆಮ್ಲೆಟ್
ಬೇಕಾಗುವ ಸಾಮಗ್ರಿ:
ಮೊಟ್ಟೆ 2
ಉಪ್ಪು,
ಅರಿಶಿಣ ಚಿಟಿಕೆ
ಖಾರದ ಪುಡಿ ಚಿಟಿಕೆ
ಕಾಳುಮೆಣಸಿನ ಪುಡಿ ಚಿಟಿಕೆ
ಹಸಿಮೆಣಸು & ಪುದಿನಾ
ಟೊಮೆಟೊ ಕೆಚಪ್ 2 ಚಮಚ
ಮೊದಲು ಒಂದು ಚಿಕ್ಕ ಜಾರಿನಲ್ಲಿ ಹಸಿಮೆಣಸು, ಪುದಿನಾ ಮತ್ತು ಉಪ್ಪನ್ನು ಹಾಕಿಕೊಂಡು ರುಬ್ಬಿಕೊಳ್ಳಿ ಅದಕ್ಕೆ ನೀರನ್ನು ಹಾಕಬೇಡಿ ನಂತರ ಒಂದು ಬೌಲ್‍ನಲ್ಲಿ ಮೊಟ್ಟೆ ಒಡೆದು ಹಾಕಿ ಅದಕ್ಕೆ ಉಪ್ಪು, ಅರಿಶಿಣ, ಖಾರದ ಪುಡಿ ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪ್ಯಾನ್ ಬಿಸಿಗಿಟ್ಟು ಅದಕ್ಕೆ ಒಂದು ಚಮಚ ಎಣ್ಣೆ ಹಾಕಿ ಮೊಟ್ಟೆಯ ಮಿಶ್ರಣವನ್ನು ಹಾಕಿ. ನಂತರ ಬ್ರೆಡ್ ತುಂಡನ್ನು ತೆಗೆದುಕೊಂಡು ಪ್ಯಾನ್‍ನಲ್ಲಿರುವ ಮೊಟ್ಟೆಯ ಮಿಶ್ರಣ(ಆಮ್ಲೆಟ್)ದ ಮೇಲೆ ಒಮ್ಮೆ ಅದ್ದಿ ಉಲ್ಟಾ ಮಾಡಿ ಮತ್ತೆ ಆಮ್ಲೆಟ್ ಮೇಲೆ ಇಡಿ. ನಂತರ ಎರಡೂ ಬದಿ ಆಮ್ಲೆಟ್ ಚೆನ್ನಾಗಿ ಬೆಂದ ನಂತರ ಖಾಲಿ ಇರುವ ಆಮ್ಲೆಟ್‍ನ ಭಾಗವನ್ನು ದೋಸೆ ಮಡಚಿದಂತೆ ಬ್ರೆಡ್ ಮೇಲೆ ಮಡಚಿ ಎರಡು ಬ್ರೆಡ್‌ನ ಒಳಭಾಗಕ್ಕೆ ಹಸಿಮೆಣಸು ಮತ್ತು ಪುದಿನಾ ಹಾಕಿ ಮಾಡಿಕೊಂಡಿರುವ ಪೇಸ್ಟ್ ಅನ್ನು ಹಾಕಿ ಅದರ ಮೇಲೆ ಟೊಮೆಟೊ ಕೆಚಪ್ 2 ಚಮಚ ಹಾಕಿದರೆ ಗ್ರೀನ್‌ಚಿಲ್ಲಿ ಬ್ರೆಡ್ ಆಮ್ಲೆಟ್ ಸವಿಯಲು ಸಿದ್ಧ.