Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸುಲಭವಾಗಿ ತಯಾರಿಸಿ ಟೊಮೇಟೊ ಕೆಚಪ್

ಸುಲಭವಾಗಿ ತಯಾರಿಸಿ ಟೊಮೇಟೊ ಕೆಚಪ್
ಬೆಂಗಳೂರು , ಬುಧವಾರ, 13 ಫೆಬ್ರವರಿ 2019 (15:24 IST)
ಬೆಳಗಿನ ತಿಂಡಿಗೆ ಮಕ್ಕಳಿಗೆ ಇಷ್ಟವಾಗೋ ತಿನಿಸುಗಳಲ್ಲಿ ಕೆಚಪ್ ಕುಡಾ ಒಂದು. ಇದನ್ನು ಸ್ಯಾಂಡ್‌ವಿಚ್, ಬಜ್ಜಿ ಹೀಗೆ ತರಹೇವಾರಿ ತಿನಿಸುಗಳಿಗೆ ನೆಂಚಿಕೊಳ್ಳಲು ಕೆಚಪ್ ಉತ್ತಮ ಕಾಂಬಿನೇಷನ್ ಎಂದೇ ಹೇಳಬಹುದು ಆದರೆ ಕೆಲವರಿಗೆ ಅಂಗಡಿಗಳಲ್ಲಿ ಸಿಗುವ ಕೆಚಪ್‌ಗಳು ರಾಸಾಯನಿಕದಿಂದ ಕೂಡಿರುತ್ತವೆ ಎಂಬ ಸಂಶಯವಿರುತ್ತದೆ, ಅಂತಹವರಿಗಾಗಿಯೇ ಮನೆಯಲ್ಲಿಯೇ ರುಚಿಕರವಾದ ಆರೋಗ್ಯಕ್ಕೂ ಉತ್ತಮವಾಗಿರುವ ಟೊಮೇಟೊ ಕೆಚಪ್ ಹೇಗೆ ಮಾಡುದು ಎಂಬುದು ಇಲ್ಲಿದೆ.
ಮೊದಲು 7 ಹಣ್ಣಾಗಿರುವ ಟೊಮೇಟೊವನ್ನು ತೆಗೆದುಕೊಳ್ಳಿ ನಂತರ ಅದನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ. ಅದನ್ನು ತುಂಡುಗಳಾಗಿ ಕತ್ತರಿಸಿಕೊಳ್ಳಿ ನಂತರ ಅದಕ್ಕೆ 3 ರಿಂದ 4 ಬೆಳ್ಳುಳ್ಳಿ ಎಸಳುಗಳನ್ನು ಹಾಕಿ. ಅದಕ್ಕೆ 240 ಎಮ್ ಎಲ್ ನೀರು (ಅಂದರೆ ಸುಮಾರು ಎರಡು ಕಪ್‌ನಷ್ಟು) ಹಾಕಿ ಕುಕ್ಕರಿನಲ್ಲಿ ಚೆನ್ನಾಗಿ ದೊಡ್ಡ ಊರಿಯಲ್ಲಿ ಬೇಯಿಸಿ, ಸುಮಾರು 3 ಕೂಗು ಹಾಕಿಸಿ ನಂತರ ಅದು ತಣ್ಣಗಾದ ಮೇಲೆ ಅದನ್ನು ನೀರು ಸಮೇತ ಒಂದು ಜಾರಿನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ, ತದನಂತರ ಅದನ್ನು ಒಂದು ಜಾಳಿಗೆಯಲ್ಲಿ ಸೋಸಿರಿ.
 
ಅದನ್ನು ಒಂದು ಬಾಣಲೆಯಲ್ಲಿ ಹಾಕಿಕೊಂಡು ಅದಕ್ಕೆ ಅರ್ಧ ಕಪ್ ಸಕ್ಕರೆ (ನಿಮಗೆ ರುಚಿಗೆ ಇನ್ನು ಸ್ವಲ್ಪ ಬೇಕಾದಲ್ಲಿ ಹಾಕಿಕೊಳ್ಳಬಹುದು) ಮತ್ತು ಕಾಲು ಕಪ್ ವಿನಿಗರ್ ಅನ್ನು ಹಾಕಿ ಮತ್ತು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮುಕ್ಕಾಲು ಚಮಚ ಅಚ್ಚ ಕಾರದ ಪುಡಿಯನ್ನು ಹಾಕಿ ದೊಡ್ಡ ಊರಿಯಲ್ಲಿ ಚೆನ್ನಾಗಿ ಕುದಿಸಿ.
 
ಸುಮಾರು ಒಂದು ಕುದಿ ಬಂದ ಮೇಲೆ ಸಣ್ಣ ಊರಿಯಲ್ಲಿ ಅದು ಗಟ್ಟಿ ಹದಕ್ಕೆ ಬರುವವರೆಗೂ ಚೆನ್ನಾಗಿ ಬಾಡಿಸಿ. ಅದು ಹದಕ್ಕೆ ಬಂದಿದೆ ಎಂಬಂತೆಯೇ ಅದನ್ನು ತಣ್ಣಗಾಗಲು ಬಿಟ್ಟರೆ ರುಚಿಕರವಾದ ಸ್ವಾದಿಷ್ಟಕರವಾದ ಕೆಚಪ್ ಸವಿಯಲು ಸಿದ್ಧ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಳಿ ರಕ್ತಕಣಗಳನ್ನು ಹೆಚ್ಚಿಸುವ ನಮ್ಮ ದಿನನಿತ್ಯದ ಆಹಾರಗಳು