ಬೆಂಗಳೂರು : ಸಿಹಿತಿಂಡಿಗಳನ್ನು ವೈರಸ್ ಗಳಿಂದ ರಕ್ಷಿಸಲು ಅದನ್ನು ಸಿಲ್ವರ್ ಕೋಟ್ ಗಳನ್ನು ಬಳಸುತ್ತಾರೆ. ಆದರೆ ಕೆಲವರು ಅದಕ್ಕೆ ಸಿಲ್ವರ್ ಕೋಟ್ ಬದಲು ಅಲ್ಯುಮಿನಿಯಂ ಕೋಟ್ ನ್ನು ಬಳಸಿ ಮಾರಾಟ ಮಾಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದ್ರೆ ಸಿಹಿತಿಂಡಿಗೆ ಬಳಸಿದ್ದ ಕೋಟ್ ಸಿಲ್ವರ್ ಅಥವಾ ಅಲ್ಯುಮಿನಿಯಂ ಎಂದು ತಿಳಿದುಕೊಳ್ಳಲು ಹೀಗೆ ಮಾಡಿ.
ಸಿಹಿತಿಂಡಿಗಳ ಮೇಲಿರುವ ಸಿಲ್ವರ್ ಗಳನ್ನು ಸ್ಪರ್ಶಿಸಿದಾಗ ಅದು ಬೆರಳಿಗೆ ಅಂಟಿಕೊಂಡರೆ ಅದು ಅಲ್ಯುಮಿನಿಯಂನಿಂದ ಕಲಬೆರಕೆಯಾಗಿದೆ ಎಂದರ್ಥ. ಹಾಗೇ ಅದನ್ನು ಸುಟ್ಟಾಗ ಅದು ಬೂದು ಕಪ್ಪು ಬಣ್ಣಕ್ಕೆ ತಿರುಗಿದರೆ ಅದು ಬೆಳ್ಳಿಯಲ್ಲ ಅಲ್ಯುಮಿನಿಯಂ ಎಂದರ್ಥ. ಅಲ್ಲದೇ ಅದನ್ನು ಕೈಗಳಿಂದ ಉಜ್ಜಿದಾಗ ಬೆಳ್ಳಿ ಕೋಟ್ ಕಣ್ಮರೆಯಾಗುತ್ತದೆ, ಅಲ್ಯುಮಿನಿಯಂಯಾದರೆ ಸಣ್ಣ ಉಂಡೆಯಾಗುತ್ತದೆ.