Publish Date: Sat, 03 Oct 2020 (07:55 IST)
Updated Date: Sat, 03 Oct 2020 (07:56 IST)
ಬೆಂಗಳೂರು : ಹಿಂದೂ ಪುರಾಣದಲ್ಲಿ ತುಳಸಿ ಗಿಡಕ್ಕೆ ಮಹತ್ವವಾದ ಸ್ಥಾನವಿದೆ. ತುಳಸಿ ಗಿಡ ಲಕ್ಷ್ಮೀಯ ಸ್ವರೂಪವೆಂದು ಹೇಳುತ್ತಾರೆ. ಆದಕಾರಣ ತುಳಸಿ ಗಿಡದ ಎಲೆಯಿಂದ ನಮ್ಮ ಸಮಸ್ಯೆಗಳನ್ನು ನಿವಾರಿಸಬಹುದು.
ಪ್ರತಿ ಶುಕ್ರವಾರ 5 ತುಳಸಿ ಎಲೆಗಳನ್ನು ತಂದು ಕೆಂಪು ವಸ್ತ್ರದಲ್ಲಿ ಕಟ್ಟಿ ದೇವರ ಮನೆಯಲ್ಲಿ ಇಡಿ. ಬಳಿಕ ನಿಮ್ಮ ಕೋರಿಕೆಗಳನ್ನು ಬೇಡಿಕೊಂಡು ದೇವರಿಗೆ ಪೂಜೆ ಮಾಡಿ. ಬಳಿಕ ಸಂಜೆಯ ವೇಳೆ ಹರಿಯುವ ನದಿಗೆ ಬಿಡಿ. ಇದರಿಂದ ಹಣದ ಸಮಸ್ಯೆ ನಿವಾರಣೆಯಾಗುತ್ತದೆ.
ಹಾಗೇ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರೆ ತುಳಸಿ ಎಲೆಗಳನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ರಾತ್ರಿ ಮಲಗುವಾಗ ನಿಮ್ಮ ದಿಂಬಿನ ಕೆಳಗೆ ಇಡಿ, ಬೆಳಿಗ್ಗೆ ಅದನ್ನು ಹರಿಯುವ ನದಿಗೆ ಬಿಡಿ.