Publish Date: Sat, 03 Oct 2020 (07:50 IST)
Updated Date: Sat, 03 Oct 2020 (07:52 IST)
ಬೆಂಗಳೂರು : ಎಲ್ಲರನ್ನೂ ಕಾಡುವ ಮುಖ್ಯವಾದ ಸಮಸ್ಯೆ ಎಂದರೆ ಅದು ಹಣದ ಸಮಸ್ಯೆ. ಈ ಹಣದ ಸಮಸ್ಯೆಯನ್ನು ದೂರಮಾಡಲು ನಿಮ್ಮ ಹಣವಿಡುವ ಬೀರುವಿನಲ್ಲಿ ಇವೆರಡನ್ನು ಬೆರೆಸಿ ಇಡಿ.
ಮೊದಲಿಗೆ ನಿಮ್ಮ ಮನೆಯಲ್ಲಿ ವಾಸ್ತ ಸಮಸ್ಯೆ ಇದೆಯೇ ಎಂಬುದನ್ನು ಪರೀಕ್ಷಿಸಿ. ಇಲ್ಲವಾದರೆ ಹಣದ ಸಮಸ್ಯೆ ನಿವಾರಣೆಯಾಗುವುದಿಲ್ಲ. ಹಣದ ಸಮಸ್ಯೆ ದೂರಮಾಡಲು ಲಕ್ಷ್ಮೀ ಕಟಾಕ್ಷ ನಮಗೆ ದೊರೆಯಬೇಕು. ಆದಕಾರಣ ಒಂದು ಪಚ್ಚೆ ಕರ್ಪೂರ ಹಾಗೂ ಕೇಸರಿಯನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಬೀರುವಿನಲ್ಲಿ ಇಟ್ಟರೆ ಲಕ್ಷ್ಮೀ ದೇವಿ ಆಕರ್ಷಿತಳಾಗುತ್ತಾಳೆ. ಇದರಿಂದ ಹಣದ ಸಮಸ್ಯೆ ದೂರವಾಗುತ್ತದೆ.