Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಶ್‌ರೂಮ್ ಬಿರಿಯಾನಿ (ಅಣಬೆ ಬಿರಿಯಾನಿ )

ಮಶ್‌ರೂಮ್ ಬಿರಿಯಾನಿ (ಅಣಬೆ ಬಿರಿಯಾನಿ )
ಬೆಂಗಳೂರು , ಮಂಗಳವಾರ, 28 ಆಗಸ್ಟ್ 2018 (14:04 IST)
ರಾಸಾಯನಿಕಗಳ ಸೇರ್ಪಡೆ ಇಲ್ಲದೇ ತನ್ನಷ್ಟಕ್ಕೆ ತಾನೇ ಪ್ರಕೃತಿಯಲ್ಲಿ ಬೆಳೆಯುವ ಸೂಪರ್‌ ಫುಡ್‌ಗಳಲ್ಲಿ ಅಣಬೆಗಳು ಸಹ ಒಂದು. ಅಣಬೆಯಲ್ಲಿ ಪ್ರೊಟೀನ್, ವಿಟಮಿನ್, ಮಿನರಲ್, ಅಮಿನೊ ಆಸಿಡ್, ಆಂಟಿ ಬಯಾಟಿಕ್, ಮತ್ತು ಆಂಟಿ ಯಾಕ್ಸಿಡಂಟ್ ಅಂಶಗಳು ಹೇರಳವಾಗಿರುತ್ತದೆ. ಒಣಗಿದ ಅಣಬೆಯಲ್ಲಿ ವಿಶೇಷವಾಗಿ ಬಿ1, ಬಿ2, ಬಿ5, ಬಿ6 ಮತ್ತು ಬಿ7 ಅಂಶಗಳು ಹೆಚ್ಚಾಗಿ ಇರುತ್ತದೆ.
ಬನ್ನಿ ಇಂತಹ ಆರೋಗ್ಯಕರ ಅಣಬೆಯಿಂದ ಬಿರಿಯಾನಿ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ -
 
ಬೇಕಾಗುವ ಸಾಮಗ್ರಿಗಳು:
ಅಕ್ಕಿ - 1/2 ಕೆಜಿ
ಹೆಚ್ಚಿದ ಈರುಳ್ಳಿ- 2 
ಹಸಿಮೆಣಸಿನಕಾಯಿ- 3
ಹೆಚ್ಚಿದ ಟೊಮೆಟೊ- 1
ಸಾಸಿವೆ- 1/4 ಚಮಚ
ಅಣಬೆ- 200 ಗ್ರಾಂ
ಬೇಯಿಸಿದ ಜೋಳ - 1/2 ಕಪ್
ಎಣ್ಣೆ ಹುರಿಯಲು
ರುಚಿಗೆ ತಕ್ಕಷ್ಟು ಉಪ್ಪು
ಪಲಾವ್ ಎಲೆ - 1
ಚಕ್ಕೆ, ಲವಂಗ, ಏಲಕ್ಕಿ - ಎಲ್ಲ ಸೇರಿಸಿ 2 ಚಮಚ
ಶುಂಠಿ - ಸಣ್ಣ ತುಂಡು
ಬೆಳ್ಳುಳ್ಳಿ - 2
ಪುದಿನ ಸೊಪ್ಪು - 1/4 ಕಪ್
ಕೋತ್ತಂಬರಿ ಸೊಪ್ಪು - 1/4 ಕಪ್
 
ಮಾಡುವ ವಿಧಾನ:
- ಮೊದಲಿಗೆ ಅನ್ನ ಮಾಡಿಟ್ಟುಕೊಳ್ಳಿ. 
- ಒಂದು ಮಿಕ್ಸಿಯಲ್ಲಿ ಶುಂಠಿ, ಬೆಳ್ಳುಳ್ಳಿ, ಪುದಿನ ಸೊಪ್ಪು, ಕೋತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿಯನ್ನು ಹಾಕಿ ರುಬ್ಬಿಕೊಳ್ಳಿ.  
- ಒಂದು ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಇದಕ್ಕೆ ಸಾಸಿವೆ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿ ಮಿಶ್ರಣ ಮಾಡಿ. ನಂತರ ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ಜೋಳ ಮತ್ತು ಟೊಮ್ಯಾಟೊ ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ಇವು ಬೆಂದ ನಂತರ ಉಪ್ಪನ್ನು ಹಾಗು ರುಬ್ಬಿದ ಮಸಾಲಾ ಹಾಕಿ ನಂತರ ಅಣಬೆಗಳನ್ನು ಹಾಕಿ ನಿಧಾನವಾಗಿ ಕಲಸಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ಅಣಬೆಗಳು ಬೆಂದ ನಂತರ ಇದರೊಂದಿಗೆ ಅನ್ನವನ್ನು ಬೆರೆಸಿ ನಿಧಾನವಾಗಿ ಚೆನ್ನಾಗಿ ಕಲಸಿದರೆ ರುಚಿಕರ ಮತ್ತು ಆರೋಗ್ಯಕರ ಅಣಬೆಯಿಂದ ಬಿರ್ಯಾನಿ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಲೆನಾಡು ಪನ್ನೀರ್ ಮಂಚೂರಿ