Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈರುಳ್ಳಿಯನ್ನು ಹೀಗೂ ಬಳಸಬಹುದು...!!

ಈರುಳ್ಳಿಯನ್ನು ಹೀಗೂ ಬಳಸಬಹುದು...!!
ಬೆಂಗಳೂರು , ಮಂಗಳವಾರ, 21 ಆಗಸ್ಟ್ 2018 (19:14 IST)
ಈರುಳ್ಳಿ ಅಡುಗೆ ಮಾಡಲು ಬಳಸುವ ಒಂದು ಸಾಧಾರಣ ತರಕಾರಿ ಎಂದು ನೀವು ಭಾವಿಸಿದ್ದರೆ ಅದು ನಿಜವಲ್ಲ. ಇದು ಹಲವು ರೋಗಗಳಿಗೆ ಉತ್ತಮ ಔಷಧವಾಗಬಲ್ಲದು. ಹಸಿ ಈರುಳ್ಳಿಯನ್ನು ರಾತ್ರಿ ಮಲಗುವಾಗ ಕಾಲಮೇಲೆ ಇಟ್ಟುಕೊಂಡು ಮಲಗಿದರೆ ಇದು ನಂಬಲು ಸಾಧ್ಯವಾಗದಷ್ಟು ಉತ್ತಮ ಪರಿಣಾಮಗಳನ್ನು ನೀಡುತ್ತದೆ. ಇದು ಬ್ಯಾಕ್ಟೀರಿಯಾ ನಿರೋಧಕವಾಗಿಯೂ ಸಹ ಕೆಲಸ ಮಾಡುತ್ತದೆ.
 ನಮ್ಮ ಪಾದದ ತಳದಲ್ಲಿ ದೇಹದ 7000 ನರದ ತುದಿಗಳು ಶಕ್ತಿಯುತವಾದ ಸರ್ಕ್ಯೂಟ್ ಅನ್ನು ರೂಪಿಸುತ್ತವೆ. ಆದ್ದರಿಂದ ಬರಿಗಾಲಿನಲ್ಲಿ ನಡೆಯುವುದು ಪುನರ್ಯೌವ್ವನವನ್ನು ಪಡೆಯಲು ಉತ್ತಮ ಮಾರ್ಗವಾಗಿದೆ. ಕಫ, ಶೀತ, ಫ್ಲೂ ಇಂತಹ ರೋಗಗಳಿಗೆ ಇದು ರಾಮಬಾಣವಾಗಿದೆ. ಇದು ಕಾಲಿನ ಒಡಕು ಹಾಗೂ ಒರಟಾದ ಪಾದದ ಸಮಸ್ಯೆಯನ್ನೂ ಸಹ ಹೋಗಲಾಡಿಸುತ್ತದೆ. ಇಂತಹ ಬಹುಉಪಯೋಗಿ ಈರುಳ್ಳಿಯನ್ನು ಹೇಗೆ ಬಳಸುವುದು ಎಂದು ನೋಡಿ.
 
*ಒಂದು ಈರುಳ್ಳಿಯನ್ನು ವೃತ್ತಾಕಾರದಲ್ಲಿ ಸ್ಲೈಸ್‌ಗಳಾಗಿ ಕತ್ತರಿಸಿಕೊಳ್ಳಿ. ನಂತರ ಅದನ್ನು ಚೆನ್ನಾಗಿ ತೊಳೆದುಕೊಳ್ಳಿ.
 
*ನಂತರ ಅದನ್ನು ನಿಮ್ಮ ಪಾದದ ಮೇಲೆ ಇಟ್ಟು ಸಾಕ್ಸ್‌ ಅನ್ನು ಧರಿಸಿ. ರಾತ್ರಿ ಪೂರ್ತಿಯಾಗಿ ಈರುಳ್ಳಿ ನಿಮ್ಮ ಪಾದಕ್ಕೆ ಹೊಂದಿಕೊಂಡಿರುವಂತೆ ನೋಡಿಕೊಳ್ಳಿ.
 
*ಉತ್ತಮ ಪರಿಣಾಮಕ್ಕಾಗಿ ನೀವು ಇದನ್ನು ಕನಿಷ್ಟ 5 ದಿನಗಳು ಸತತವಾಗಿ ಮಾಡಬೇಕು.
 
ನೀವೂ ಒಮ್ಮೆ ಈ ವಿಧಾನವನ್ನು ಪ್ರಯತ್ನಿಸಿ ನೋಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳುಳ್ಳಿ ಪುಟ್ಟದು ; ಪರಿಣಾಮಗಳು ದೊಡ್ಡದು