Webdunia - Bharat's app for daily news and videos

Install App

ರುಚಿಯಾದ ಚಿಕನ್ ಬಿರಿಯಾನಿ

Webdunia
ಶನಿವಾರ, 25 ಜುಲೈ 2020 (09:00 IST)
ಬೆಂಗಳೂರು : ಚಿಕನ್ ಬಿರಿಯಾನಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಮನೆಯಲ್ಲಿಯೇ ರುಚಿಯಾದ ಚಿಕನ್ ಬಿರಿಯಾನಿ ತಯಾರಿಸಿ.

ಬೇಕಾಗುವ ಸಾಮಾಗ್ರಿಗಳು : ಚಿಕನ್ ½  ಕೆ.ಜಿ, ಅಕ್ಕಿ-2 ಲೋಟ, ಮೊಸರು ½  ಕಪ್, ಕೆಂಪು ಮೆಣಸಿನ ಪುಡಿ-1 ಚಮಚ, ಗರಂ ಮಸಾಲಾ ½  ಚಮಚ, ದನಿಯಾ ಪುಡಿ- ½  ಚಮಚ,, ಜೀರಿಗೆ ¼ ಚಮಚ, ಚಕ್ಕೆ ಅರ್ಧ ಪೀಸ್, ಚಕ್ರ ಮೊಗ್ಗು-1, ಜಾಪತ್ರೆ-ಒಂದು ಸಣ್ಣ ಚೂರು, ಏಲಕ್ಕಿ-2, ಲವಂಗ-1, ಈರುಳ್ಳಿ ಒಂದು ದೊಡ್ಡದ್ದು, ಟೊಮೆಟೊ-1, ಉಪ್ಪು ರುಚಿಗೆ ತಕ್ಕಷ್ಟು, ಲಿಂಬೆ ರಸ-1 ಚಮಚ, ಬಿರಿಯಾನಿ ಮಸಾಲ ½  ಚಮಚ, ಪುದೀನಾ, ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್-2 ಚಮಚ, ಪಲಾವ್ ಎಲೆ-1. ಹಸಿಮೆಣಸು-3.

ಮಾಡುವ ವಿಧಾನ : ಮೊದಲಿಗೆ ಚಿಕನ್ ಗೆ ಅರ್ಧ ಚಮಚ ಖಾರದ ಪುಡಿ, ಅರ್ಧ ಚಮಚ ಗರಂ ಮಸಾಲಾ, ಧನಿಯಾ ಪುಡಿ, ಜೀರಿಗೆ ಪುಡಿ, ಮೊಸರು, ಲಿಂಬೆ ರಸ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 1 ಗಂಟೆಗಳ ಕಾಲ ಇಡಿ. ಬಳಿಕ ಕುಕ್ಕರ್ ಗೆ ತುಪ್ಪ, ಎಣ್ಣೆ ಹಾಕಿ ಪಲಾವ್ ಎಲೆ, ಮೊಗ್ಗು, ಚಕ್ಕೆ, ಏಲಕ್ಕಿ, ಲವಂಗ, ಜಾಪತ್ರೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಈರುಳ್ಳಿ, ಟೊಮೆಟೊ, ಹಸಿಮೆಣಸು ಉಪ್ಪು, , ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಹಾಕಿ ಫ್ರೈ ಮಾಡಿ. ಚಿಕನ್ ಹಾಕಿ ಬೇಯಿಸಿ. ನಂತರ ಅಕ್ಕಿ ಅದಕ್ಕೆ ಅಕ್ಕಿಯ ಎರಡರಷ್ಟು ನೀರು ಸೇರಿಸಿ ಕುಕ್ಕರ್ ಮುಚ್ಚಳ ಎರಡು ವಿಷಲ್ ಬರಿಸಿದರೆ ಚಿಕನ್ ಬಿರಿಯಾನಿ ರೆಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments