Normal
0
false
false
false
EN-US
X-NONE
X-NONE
ಬೆಂಗಳೂರು : ನಮ್ಮ ದೇಹದಲ್ಲಿರುವ ಮಚ್ಚೆಗಳು ಕೂಡ ನಮಗೆ ಅದೃಷ್ಟ, ದುರಾದೃಷ್ಟಗಳನ್ನು ತರುತ್ತವೆ. ಆದಕಾರಣ ಹೆಣ್ಣು ಮಕ್ಕಳಿಗೆ ದೇಹದಲ್ಲಿ ಮಚ್ಚೆ ಎಲ್ಲಿ ಎದ್ದರೆ ಅದೃಷ್ಟ ಎಂಬುದನ್ನು ತಿಳಿಯೋಣ.
ಹೆಣ್ಣು ಮಕ್ಕಳು ಹುಟ್ಟುವಾಗ ದೇಹದ ಎಡಭಾಗದಲ್ಲಿ ದೇಹದ ಹಿಂಬದಿಯಲ್ಲಿ ಮಚ್ಚೆಗಳಿದ್ದರೆ ತುಂಬಾ ಅದೃಷ್ಟ. ಆಕೆಯನ್ನು ಲಕ್ಷ್ಮೀಯ ಸ್ವರೂಪ ಎನ್ನಲಾಗುತ್ತದೆ. ಗಂಡನ ಮನೆಗೆ ಅದೃಷ್ಟ ಲಕ್ಷ್ಮೀಯಾಗಿರುತ್ತಾಳೆ. ಹಾಗೇ ಹೊಟ್ಟೆಯ ಬಲಭಾಗದಲ್ಲಿ ಹೊಕ್ಕಳಿನಿಂದ ಮೇಲ್ಭಾಗದಲ್ಲಿ ಮಚ್ಚೆ ಇದ್ದರೆ
ದಾಂಪತ್ಯ, ಸಂತಾನ, ಸಾತ್ವಿಕ ಗುಣಲಕ್ಷಣ ಹೊಂದಿರುವ ಸ್ತ್ರೀಯಾಗಿರುತ್ತಾಳೆ. ತುಟಿಯ ಭಾಗದ ಹತ್ತಿರ ಮಚ್ಚೆ ಇದ್ದರೆ ಅದು ಶುಕ್ರ ಆಕರ್ಷಣಾ ಯೋಗ ಎಂದು ಕರೆಯುತ್ತಾರೆ. ಇಂತಹ ಮಹಿಳೆ ಕಲಾತ್ಮಕ ಗುಣಗಳನ್ನು ಹೊಂದಿರುತ್ತಾಳೆ.