ಬೇಕಾಗುವ ಪದಾರ್ಥಗಳು
ತುಪ್ಪ - 2-3 ಚಮಚ
ಪಲಾವ್ ಎಲೆ - 2
ಚಕ್ಕೆ - 1
ಮರಾಠಿ ಮೊಗ್ಗು - 1
ಕಾಳು ಮೆಣಸು - 10
ಲವಂಗ - 3-4
ಜೀರಿಗೆ - ಸ್ವಲ್ಪ
ಗೋಡಂಬಿ - 6
ಬಾಸುಮತಿ ಅಕ್ಕಿ - 1 ಬಟ್ಟಲು (30 ನಿಮಿಷ ನೆನೆಸಿದ್ದು)
ಉಪ್ಪು- ರುಚಿಗೆ ತಕ್ಕಷ್ಟು
ಗರಂ ಮಸಾಲಾ - ಅರ್ಧ ಚಮಚ
ಬಟಾಣಿ - ಮುಕ್ಕಾಲು ಬಟ್ಟಲು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ -
- ಪ್ರೆಷರ್ ಕುಕ್ಕರ್‌ನಲ್ಲಿ ತುಪ್ಪ ಹಾಕಿ, ಅದನ್ನು ಬಿಸಿ ಮಾಡಿರಕೊಳ್ಳಿ
- ಅದಕ್ಕೆ ಪಲಾವ್ ಎಲೆ, ಚಕ್ಕೆ, ಮರಾಠಿ ಮೊಗ್ಗು, ಕಾಳು ಮೆಣಸು, ಲವಂಗ, ಜೀರಿಗೆ, ಗೋಡಂಬಿ ಹಾಕಿ ಕಂದು ಬಣ್ಣ ಬರುವ ತನಕ ಹುರಿಯಿರಿ. - ಅದಕ್ಕೆ ಬಾಸುಮತಿ ಅಕ್ಕಿ, ಉಪ್ಪು, ಗರಂ ಮಸಾಲಾ, ಬಟಾಣಿ ಹಾಕಿ 5 ನಿಮಿಷ ಹುರಿಯಿರಿ
- ನಂತರ 1 ಕಪ್ ನೀರು ಹಾಕಿ ಕುಕ್ಕರಿನ ಮುಚ್ಚಳ ಮುಚ್ಚಿ 2 ಕೂಗು ಕೂಗಿಸಿಕೊಂಡರೆ,
- ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಬಟಾಣಿ ಪಲಾವ್ ಸವಿಯಲು ಸಿದ್ಧ.