Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಿಕನ್ ಪಾಪ್‌ಕಾರ್ನ್

ಚಿಕನ್ ಪಾಪ್‌ಕಾರ್ನ್

ಅತಿಥಾ

ಬೆಂಗಳೂರು , ಗುರುವಾರ, 25 ಜನವರಿ 2018 (17:57 IST)
ಬೇಕಾಗುವ ಸಾಮಗ್ರಿಗಳು
ಬೋನ್‌ಲೆಸ್ ಚಿಕನ್ - 1 ಕಪ್ (ಸಣ್ಣದಾಗಿ ತುಂಡು)
ಮೊಸರು - 1/4 ಕಪ್
ಕಾರ್ನ್ ಹಿಟ್ಟು - 1/2 ಕಪ್
ಕಾಳುಮೆಣಸಿನ ಪುಡಿ - 1/4 ಚಮಚ
ಕೆಂಪು ಮೆಣಸಿನ ಪುಡಿ - 1/4 ಚಮಚ
ಉಪ್ಪು
ಓರೆಗಾನೊ - 1/2 ಚಮಚ
ಬ್ರೆಡ್ ಪುಡಿ - 1 ಕಪ್
ಎಣ್ಣೆ - 1 ಕಪ್ 
ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ
 
ಮಾಡುವ ವಿಧಾನ
 
- ಬೋನ್‌ಲೆಸ್ ಚಿಕನ್ ತುಂಡುಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ ಮೊಸರು, ಕೆಂಪು ಮೆಣಸಿನ ಪುಡಿ, ಕಾಳುಮೆಣಸಿನ ಮೆಣಸು ಪುಡಿ, ಓರೆಗಾನೊ, ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಕಾರ್ನ್ ಹಿಟ್ಟು ಸೇರಿಸಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಸುಮಾರು 4 ಗಂಟೆಗಳ ಕಾಲ ಹಾಗೆಯೇ ಬಿಡಿ.
- ಒಂದು ಬಟ್ಟಲಿನಲ್ಲಿ ಬ್ರೆಡ್ ಪುಡಿ ಮತ್ತು ಓರೆಗಾನೊ ಹಾಕಿ ಮಿಶ್ರಣ ಮಾಡಿ
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ
- ಈಗ ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಬ್ರೆಡ್ ಪುಡಿ ಮತ್ತು ಓರೆಗಾನೊ ಮಿಶ್ರಣದಲ್ಲಿ ಅದ್ದಿಸಿ, ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಹುರಿಯಿರಿ
- ರುಚಿಕರ ಚಿಕನ್ ಪಾಪ್‌ಕಾರ್ನ್ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾದಿಷ್ಠ ಈರುಳ್ಳಿ ಚಿಕನ್