ಬೇಕಾಗುವ ಸಾಮಗ್ರಿಗಳು -
ಸ್ವಚ್ಛಗೊಳಿಸ ಸೀಗಡಿ ಮೀನು - 1 ಕಪ್
ನಿಂಬೆ ಹಣ್ಣು - 1
ಉಪ್ಪು
ಖಾರ ಪುಡಿ - 2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ
ಮೊಸರು - 1/2 ಕಪ್
ಕ್ರೀಮ್ - 1/4 ಕಪ್
ಚಿಕ್ಕದಾಗಿ ಹೆಚ್ಚಿದ ಈರುಳ್ಳಿ - 1
3 ಟೊಮೆಟೊ ಹಣ್ಣಿನ ರಸ / ಪ್ಯೂರಿ
ಅರಿಶಿನ -1/2 ಚಮಚ
ಜೀರಿಗೆ - 1 ಚಮಚ
ಗರಂ ಮಸಾಲಾ ಪುಡಿ - 1 ಚಮಚ
ಬೆಣ್ಣೆ - 1 ಚಮಚ
ಎಣ್ಣೆ - 2 ಚಮಚ
ತಂದೂರಿ ಮಸಾಲಾ ಪುಡಿ(ಐಚ್ಛಿಕ)
ಮಾಡುವ ವಿಧಾನ -
- ಒಂದು ಪಾತ್ರೆಯಲ್ಲಿ ಸೀಗಡಿ, ಉಪ್ಪು, ಖಾರ ಪುಡಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಮಿಶ್ರಣ ಮಾಡಿ 15-20 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.
- ಒಂದು ಪ್ಯಾನ್‌ನಲ್ಲಿ ಬೆಣ್ಣೆ ಹಾಕಿ ಮ್ಯಾರಿನೇಟ್ ಮಾಡಿದ ಸೀಗಡಿಗಳನ್ನು ಸೇರಿಸಿ ಮತ್ತು 4-5 ನಿಮಿಷ ಬೇಯಿಸಿ, ಇನ್ನೊಂದು ಬಟ್ಟಲಿನಲ್ಲಿ ಹಾಕಿ ಪಕ್ಕಕ್ಕೆ ಇರಿಸಿ.
- ಅದೇ ಪ್ಯಾನ್‌ನಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಹೆಚ್ಚಿದ ಈರುಳ್ಳಿ, ಉಪ್ಪು ಸೇರಿಸಿ 4-5 ನಿಮಿಷಗಳ ಕಾಲ ಹುರಿಯಿರಿ.
- ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರ ಪುಡಿ, ಅರಿಶಿನ ಪುಡಿ, ಉಪ್ಪು ಸೇರಿಸಿ ಸ್ವಲ್ಪ ಹುರಿಯಿರಿ.
- ಅದಕ್ಕೆ ಟೊಮೆಟೊ ಹಣ್ಣಿನ ರಸ / ಪ್ಯೂರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, 3- 4 ನಿಮಿಷಗಳ ಕಾಲ ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿ.
- ಅದಕ್ಕೆ ಕ್ರೀಮ್, ಮೊಸರು ಮತ್ತು ಗರಂ ಮಸಾಲಾ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ.
- ಬೇಯಿಸಿದ ಸೀಗಡಿಗಳು, ತಂದೂರಿ ಮಸಾಲಾ ಪುಡಿ ಮತ್ತು ರುಚಿಗೆ ಉಪ್ಪು ಸೇರಿಸಿದರೆ ರುಚಿಕರ ಸೀಗಡಿ ಟಿಕ್ಕಾ ನಾನ್ ಅಥವಾ ರೋಟಿ ಜೊತೆ ಸವಿಯಲು ಸಿದ್ದ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.