ಬೇಕಾಗುವ ಸಾಮಾಗ್ರಿಗಳು-
ಬೀಟ್ರೂಟ್ - 1 ಕಪ್ (ಹೆಚ್ಚಿದ್ದು)
ಟೊಮೆಟೊ- 1 (ಹೆಚ್ಚಿದ್ದು)
ಅಕ್ಕಿ - 2 ಕಪ್
ಬಟಾನಿ ಕಾಳು - 1/2 ಕಪ್
ಹಸಿಮೆಣಸು - 4 ರಿಂದ 5
ಗರಂ ಮಸಾಲಾ - 1 ಚಮಚ
ಕೊತ್ತಂಬರಿ ಪುಡಿ - 1 ಚಮಚ
ಬೇ ಲೀಫ್ - 2
ಈರುಳ್ಳಿ - 1 (ಹೆಚ್ಚಿದ್ದು)
ಜೀರಿಗೆ - 1/4 ಚಮಚ
ಏಲಕ್ಕಿ - 3 ರಿಂದ 4
ಗೇರುಬೀಜ - 8 ರಿಂದ 10
ಮಾಡುವ ವಿಧಾನ
- ಕುಕ್ಕರ್ ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿ ಮಾಡಿ, ಬೇ ಲೀವ್ಸ್, ಜೀರಿಗೆ ಮತ್ತು ಹಸಿಮೆಣಸು, ಗರಂ ಮಸಾಲಾ, ಕೊತ್ತಂಬರಿ ಪುಡಿ, ಏಲಕ್ಕಿ, ಮತ್ತು ಗೇರುಬೀಜ, ಹೆಚ್ಚಿದ ಈರುಳ್ಳಿ, ಟೊಮೆಟೊ, ಬಟಾನಿ ಕಾಳನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.
- ಅದಕ್ಕೆ ಹೆಚ್ಚಿದ ಬೀಟ್ರೂಟ್ ಹಾಕಿ, ಸೌಟಿನಿಂದ ಕೈಯಾಡಿಸಿ
- ಸರಿಯಾದ ನೀರಿನ ಅಳತೆಯೊಂದಿಗೆ ಅಕ್ಕಿಯನ್ನು ಹಾಕಿ
- ಉಪ್ಪು ಹಾಕಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಎರಡು ವಿಶಲ್ಗಾಗಿ ಕೂಗಿಸಿದರೆ ಬೀಟ್ರೂಟ್ ಪಲಾವ್ ಸವಿಯಲು ಸಿದ್ದ
- ಸೌತೆಕಾಯಿ ರಾಯಿತದೊಂದಿಗೆ ಪಲಾವ್ ಅನ್ನು ಸವಿಯಲು ಇನ್ನಷ್ಟು ರುಚಿಕರವಾಗಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.