Select Your Language

Notifications

webdunia
webdunia
webdunia
webdunia

ಚಪಾತಿ ಜಾಮೂನು

ಚಪಾತಿ ಜಾಮೂನ್
ಇನ್ನು ಅಯ್ಯೋ ಚಪಾತಿ ಮಾಡಿದ್ದು ಜಾಸ್ತಿ ಆಯ್ತು, ವೇಸ್ಟ್ ಆಗುತ್ತಲಾ ಅಂತಾ ಬೇಜಾರು ಮಾಡ್ಕೋಬೇಡಿ. ಉಳಿದಿರುವ ಚಪಾತಿಯಿಂದ ರುಚಿಕರವಾದ ಜಾಮೂನ್‌ನ್ನು ಮಾಡಬಹುದು. ಇದನ್ನು ಮಾಡುವುದು ಸರಳವಾಗಿಯೂ ಹೌದು, ರುಚಿಕರವಾದದ್ದೂ ಹೌದು. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..
 ಬೇಕಾಗುವ ಸಾಮಗ್ರಿಗಳು :
 
* ಉಳಿದಿರುವ ಚಪಾತಿ
* ಸ್ವಲ್ಪ ಹಾಲು
* 2 ಚಮಚ ಹಾಲಿನ ಪುಡಿ
* ಒಂದರಿಂದ ಒಂದೂ ವರೆ ಕಪ್ ಸಕ್ಕರೆ
* 2 ಹನಿ ರೋಸ್ ಎಸ್ಸೆನ್ಸ
 
ತಯಾರಿಸುವ ವಿಧಾನ :
 
ಮೊದಲು ಚಪಾತಿಯನ್ನು ತುಂಡುಗಳನ್ನಾಗಿ ಮಾಡಿ ಮಿಕ್ಸರ್‌ನಲ್ಲಿ ಪುಡಿ ಮಾಡಬೇಕು. ನಂತರ ಮಿಕ್ಸರ್ ಮಾಡಿದ ಚಪಾತಿ ಪುಡಿಗೆ 2 ಚಮಚ ಹಾಲಿನ ಪುಡಿ ಹಾಕಿ ಅದು ಮುಳುಗುವಷ್ಟು ಹಾಲನ್ನು ಹಾಕಿ ಮೃದುವಾಗಿ ಹಿಟ್ಟನ್ನು ಕಲೆಸಬೇಕು. ಅದನ್ನು 20 ನಿಮಿಷ ನೆನೆಯಲು ಬಿಡಬೇಕು. ನಂತರ ಒಂದರಿಂದ ಒಂದೂವರೆ ಕಪ್ ಸಕ್ಕರೆಗೆ 2 ಕಪ್ ನೀರನ್ನು ಹಾಕಿ ಪಾಕವನ್ನು ತಯಾರಿಸಬೇಕು. ನಂತರ ನೆನೆದ ಹಿಟ್ಟನ್ನು ಇನ್ನೊಮ್ಮೆ ನಾದಿ ನಿಮಗೆ ಬೇಕಾದ ಆಕಾರದಲ್ಲಿ ಉಂಡೆಗಳನ್ನು ಮಾಡಿ ಎಣ್ಣೆಯಲ್ಲಿ ಕರಿಯಬೇಕು. ನಂತರ ಜಾಮೂನುಗಳು ಸ್ವಲ್ಪ ಆರಿದ ನಂತರ ಸಕ್ಕರೆ ಪಾಕಕ್ಕೆ 2 ಹನಿ ರೋಸ್ ಎಸ್ಸೆನ್ಸ್ ಹಾಕಿ ಜಾಮೂನುಗಳನ್ನು ಹಾಕಿ 1/2 ಗಂಟೆಯ ನಂತರ ರುಚಿ ರುಚಿಯಾದ ಚಪಾತಿ ಜಾಮೂನು ಸವಿಯಲು ಸಿದ್ಧ.    

Share this Story:

Follow Webdunia kannada

ಮುಂದಿನ ಸುದ್ದಿ

ಕಪ್ಪು ದ್ರಾಕ್ಷಿಯ ಸೇವನೆಯಿಂದಾಗುವ ಪ್ರಯೋಜನಗಳನ್ನು ನೀವು ಅರಿತಿರುವಿರಾ?