ಕೊಡಗು ಸಂತ್ರಸ್ತರಿಗೆ ಸಿಗಬೇಕಾದ ವಸ್ತುಗಳು ಕೊಳೆತು, ಹುಳಗಳ ಪಾಲಾಗುತ್ತಿವೆ.
ಕೊಡಗು ಪ್ರಕೃತಿ ದುರಂತ ಸಂದರ್ಭ ರಾಜ್ಯದ ಜನತೆ ನೀಡಿದ ಆಹಾರ ಪದಾರ್ಥಗಳು ಗೋದಾಮಿನಲ್ಲಿವೆ.
ಸಂತ್ರಸ್ಥರಿಗೆಂದು ವಿವಿಧೆಡೆಗಳಿಂದ ದಾನಿಗಳು ನೀಡಿದ್ದ ಪರಿಹಾರ ಸಾಮಗ್ರಿಗಳ ಸಮರ್ಪಕವಾಗಿ ವಿಲೇವಾರಿಯಾಗದೆ ಗೋದಾಮಿನಲ್ಲಿ ಕೊಳೆಯುತ್ತಿವೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದ ಎಪಿಎಂಸಿ ಗೋದಾಮಿನಲ್ಲಿ ಹತ್ತು ಟನ್ ಗಳಷ್ಟು ಆಹಾರ ಪದಾರ್ಥಗಳ ಶೇಖರಣೆ ಮಾಡಲಾಗಿದೆ. ಸಂತ್ರಸ್ತರಿಗೆ ವಿತರಿಸಲೆಂದು ಕೃಷಿ ಉತ್ಪನ್ನ ಮಾರುಕಟ್ಟೆಯ ಗೋದಾಮಿನಲ್ಲಿ ದಾಸ್ತಾನು ಇರಿಸಿದ್ದ ಆಹಾರ ಪದಾರ್ಥಗಳು ಕೆಡುತ್ತಿವೆ.
ಅವಧಿ ಮೀರಿದ ಗೋಧಿ ಪುಡಿ, ಬಿಸ್ಕೆಟ್, ತಂಪು ಪಾನಿಯಗಳು, ಹುಳು ಹಿಡಿಯುತ್ತಿರುವ ಜೋಳ, ತೊಗರಿ ಬೇಳೆ, ಅಕ್ಕಿ ಮೂಟೆಗಳು ಇಲ್ಲಿವೆ.
ನ್ಯಾಪ್‌ಕಿನ್, ಬಟ್ಟೆ, ಪಾದರಕ್ಷೆ, ಪ್ಲಾಸ್ಟಿಕ್ ಬಕೆಟ್ ಇನ್ನಿತರ ಸಾಮಗ್ರಿಗಳು ಸಮರ್ಪಕವಾಗಿ ವಿಲೇವಾರಿಗೊಳ್ಳದೆ ಗೋದಾಮಿನಲ್ಲೇ ಇರಿಸಿಕೊಂಡಿರುವ ಅಧಿಕಾರಿಗಳ ಕಾರ್ಯವೈಖರಿಗೆ ಸಂತ್ರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.