ಬೇಕಾಗುವ ಸಾಮಗ್ರಿಗಳು:
* ಪ್ಲೇನ್ ಮಾರಿ ಬಿಸ್ಕತ್ ಪ್ಯಾಕ್ 1
* ಆರೇಂಜ್ ಫ್ಲೇವರ್ ಮಾರಿ ಬಿಸ್ಕತ್ 1 ಪ್ಯಾಕ್
* ಸಕ್ಕರೆ ಪುಡಿ ಸ್ವಲ್ಪ
* ಕೋಕೋ ಪೌಡರ್ ಸ್ವಲ್ಪ
* ಡ್ರಿಂಕಿಂಗ್ ಚಾಕೋಲೇಟ್ ಸ್ವಲ್ಪ
* ಹಾಲು
ತಯಾರಿಸುವ ವಿಧಾನ:
ಮೊದಲು ಸಕ್ಕರೆ, ಕೋಕೋ ಪೌಡರ್, ಡ್ರಿಂಕಿಂಗ್ ಚಾಕೋಲೇಟ್, ಹಾಲು ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ಒಂದೊಂದು ತರಹದ ಬಿಸ್ಕತ್ ಅನ್ನು ಒಂದೊಂದು ಅದ್ದಿ ಒಂದರ ಮೋಲೊಂದರಂತೆ ಟವರ್‌ನಂತೆ ಜೋಡಿಸಿಕೊಳ್ಳಬೇಕು. ನಂತರ ಇದರ ಮೇಲೆ ಸುತ್ತಲೂ ಕಲೆಸಿದ ಮಿಶ್ರಣವನ್ನು ಸ್ಲೈಡ್ ಮಾಡಿಕೊಳ್ಳಬೇಕು. ನಂತರ ಇದನ್ನು ಪ್ರಿಡ್ಜ್‌ನಲ್ಲಿ 2 ಗಂಟೆಗಳ ಕಾಲ ಇಟ್ಟು ನಂತರ ಅದನ್ನು ಸ್ಲ್ಯಾಂಟಾಗಿ ಸ್ಲೈಸ್‌ಗಳನ್ನಾಗಿ ಕಟ್ ಮಾಡಿ ಅದನ್ನು ತಟ್ಟೆಯಲ್ಲಿ ಜೋಡಿಸಬೇಕು.
ನಂತರ ಚಾಕೋಲೇಟ್ ಸಾಸ್‌ನಿಂದ ಅದರ ಮೇಲೆ ಸ್ಪ್ರಿಂಕಲ್ ಮಾಡಿದರೆ ನೋಡಲು ಆಕರ್ಷಕವಾಗಿರುತ್ತದೆ ಮತ್ತು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದನ್ನು ಕಡಿಮೆ ಸಾಮಗ್ರಿಗಳಲ್ಲಿ ಸುಲಭವಾಗಿ ಬೇಗನೆ ಮಾಡಬಹುದು.