Publish Date: Tue, 11 Aug 2020 (08:43 IST)
Updated Date: Tue, 11 Aug 2020 (08:45 IST)
ಬೆಂಗಳೂರು : ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಇದೆ. ಕೃಷ್ಣನಿಗೆ ನೈವೇದ್ಯಕ್ಕಾಗಿ ಆತನಿಗೆ ಪ್ರಿಯವಾದ ಅವಲಕ್ಕಿಯಿಂದ ಲಡ್ಡು ಮಾಡಿ.
ಮೊದಲಿಗೆ ಸ್ವಲ್ಪ ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಆಮೇಲೆ ಅವಲಕ್ಕಿಯನ್ನು ತುಪ್ಪದಲ್ಲಿ ಹುರಿಯಿರಿ. ಬಳಿಕ ಅವಲಕ್ಕಿ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿ. ಬಳಿಕ ಬಾಣಲೆಯಲ್ಲಿ ಬೆಲ್ಲ ಮತ್ತು ನೀರು ಹಾಕಿ ಪಾಕ ತಯಾರಿಸಿ. ಆಮೇಲೆ ಅವಲಕ್ಕಿ ಪುಡಿ, ಸ್ವಲ್ಪ ಕೊಬ್ಬರಿ ತುರಿ, ದ್ರಾಕ್ಷಿ, ಗೋಡಂಬಿ ಬೆಲ್ಲದ ಪಾಕ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಉಂಡೆ ತಯಾರಿಸಿದರೆ ಅಲವಕ್ಕಿ ಲಡ್ಡು ರೆಡಿ.