ಸ್ವಾದಿಷ್ಠವಾದ ಅತ್ತಿರಸ

Webdunia
ಗುರುವಾರ, 25 ಜನವರಿ 2018 (12:32 IST)
ಬೇಕಾಗುವ ಪದಾರ್ಥಗಳು:
1 ಕೆಜಿ ಅಕ್ಕಿ 
3/4 ಕೆಜಿ ಬೆಲ್ಲ (ತುರಿದದ್ದು)
2 ಚಮಚ ಹುರಿದ ಬಿಳಿ ಎಳ್ಳು ಬೀಜ
ಎಣ್ಣೆ 
ಮಾಡುವ ವಿಧಾನ:
- ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು, ರಾತ್ರಿಯಿಡೀ ನೀರಲ್ಲಿ ನೆನೆಸಿಟ್ಟು ಬೆಳಗ್ಗೆ ನೀರನ್ನು ಚೆನ್ನಾಗಿ ಬಸಿದುಕೊಳ್ಳಿ.
- ಗ್ರೈಂಡರ್ ಅಥವಾ ಮಿಕ್ಸಿಗೆ ಅಕ್ಕಿಯನ್ನು ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ, ಅಕ್ಕಿಹಿಟ್ಟು ತೇವವಾಗಿರಬೇಕು.
- ತುರಿದಿಟ್ಟುಕೊಂಡ ಬೆಲ್ಲಕ್ಕೆ ಒಂದು ಕಪ್ ನೀರು ಹಾಕಿ ಅದನ್ನು ಬಾಣಲೆಯಲ್ಲಿ ಹಾಕಿ ಹದ ಬರುವವರೆಗೆ ಬಿಸಿ ಮಾಡಿಕೊಳ್ಳಿ, ಬೆಲ್ಲ ಪಾಕದಲ್ಲಿ ಕಸ, ಮರಳು ಇದ್ದರೆ ಜರಡಿಗೆ ಹಾಕಿ ಸ್ವಚ್ಛ ಮಾಡಿಕೊಳ್ಳಿ.
- ನಂತರ ಬಾಣಲೆಗೆ ಬೆಲ್ಲದ ಪಾಕ ಹದ ಬರುವವರೆಗೆ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ.
- ನಂತರ ಅದಕ್ಕೆ ಅಕ್ಕಿಹಿಟ್ಟು ಹಾಕಿ ನಿಧಾನವಾಗಿ ಸೌಟಿನಿಂದ ಕದಡುತ್ತಾ ಬನ್ನಿ.ಯಾವುದೇ ಕಾರಣಕ್ಕೂ ಉಂಡೆ ಕಟ್ಟಬಾರದು. 
- ಪಾಕ ಗಟ್ಟಿಯಾಗುತ್ತಾ ಬಂದಾಗ ಒಲೆಯಿಂದ ಕೆಳಗಿಳಿಸಿ ದೊಡ್ಡ ಉಂಡೆಯಾಕಾರ ಮಾಡಿಟ್ಟುಕೊಳ್ಳಿ.
- ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಶೀಟ್ ನಲ್ಲಿ ಇಟ್ಟು ತೆಳುವಾಗಿ ಪೂರಿಯ ಆಕಾರಕ್ಕೆ ಮಾಡಿಟ್ಟುಕೊಳ್ಳಿ.
- ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.
- ಎಣ್ಣೆಯಲ್ಲಿ ಪೂರಿಯಾಕಾರದ ಹಿಟ್ಟನ್ನು ಒಂದೊಂದನ್ನೇ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ತೆಗೆಯಿರಿ.
- ಅದನ್ನು ಬಿಸಿಯಿರುವಾಗಲೇ ಹುರಿದಿಟ್ಟುಕೊಂಡ ಎಳ್ಳು ಬೀಜಕ್ಕೆ ಅದ್ದಿ. ಅತ್ತಿರಸ ಸಿದ್ದ. ಎಳ್ಳು ಬೇಡವೆಂದವರು ಬಳಸಬೇಕಾಗಿಲ್ಲ.
- ಆರಿದ ಮೇಲೆ ಡಬ್ಬದಲ್ಲಿ ಹಾಕಿಡಿ. ಎರಡು ವಾರಕ್ಕೂ ಅಧಿಕ ಕಾಲ ಇಟ್ಟು ತಿನ್ನಬಹುದು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಸಮಸ್ಯೆ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ಸೇವಿಸಬಾರದು video

ಮಕ್ಕಳು ಚಾಕಲೇಟ್ ತಿಂದ ತಕ್ಷಣ ನೀರು ಕುಡಿಯಬಹುದೇ ಇಲ್ಲಿದೆ ಟಿಪ್ಸ್ video

ಪುರುಷರು ಒಣ ಮೀನು ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಕಾಲಿನ ಮಾಂಸಖಂಡಗಳು ನೋವಾಗುತ್ತಿದೆಯಾ, ಇದಕ್ಕೆ ಕಾರಣ ಇಲ್ಲಿದೆ

ಮುಟ್ಟು ತಡವಾಗಿ ಆಗ್ತಿದೆಯಾ, ಇದಕ್ಕೆ ಕಾರಣಗಳು ಹೀಗಿರಬಹುದು

ಮುಂದಿನ ಸುದ್ದಿ
Show comments