ಬೆಂಗಳೂರು: ಇನ್ನೇನು ಹಲಸಿನ ಕಾಯಿ ಸೀಸನ್ ಬಂತು. ಕರಾವಳಿ, ಮಲೆನಾಡಿನಲ್ಲಿ ಈಗಾಗಲೇ ಎಳೆ ಹಲಸಿನಕಾಯಿ ಮರದಲ್ಲಿ ಜೋತಾಡುತ್ತಿರುತ್ತವೆ. ಅದರ ಉಪ್ಪಿನಕಾಯಿ ಎಷ್ಟು ರುಚಿಕರವಾಗಿರುತ್ತೆ ಗೊತ್ತಾ? ಅದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು
ಎಳೆ ಹಲಸಿನಕಾಯಿ
ಸಾಸಿವೆ
ಕೆಂಪು ಮೆಣಸು
ಇಂಗು
ಅರಶಿನ ಪುಡಿ
ಉಪ್ಪು
ಹುಣಸೆ ಹುಳಿ
ಮಾಡುವ ವಿಧಾನ
ಎಳೆ ಹಲಸಿನ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಸ್ವಲ್ಪ ಹುಳಿ, ಉಪ್ಪು, ಅರಶಿನ ಪುಡಿ ಹಾಕಿಕೊಂಡು ನೀರು ಹಾಕಿ ಬೇಯಿಸಿಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಹಾಕದೆ ಸಾಸಿವೆ, ಇಂಗು ಬಿಸಿ ಮಾಡಿಕೊಳ್ಳಿ. ಇದನ್ನು ಪ್ರತ್ಯೇಕವಾಗಿ ತೆಗೆದಿಡಿ. ಅದೇ ಬಾಣಲೆಯಲ್ಲಿ ಕೆಂಪು ಮೆಣಸು ಹಾಕಿ ಎಣ್ಣೆ ಹಾಕದೆ ಹುರಿದುಕೊಳ್ಳಿ.
ಹುರಿದಿಟ್ಟುಕೊಂಡ ವಸ್ತುಗಳನ್ನು ಒಣಗಿದ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಈ ಮಿಶ್ರಣಕ್ಕೆ ಹಲಸಿನ ಹೋಳಿನಲ್ಲಿರುವ ಉಪ್ಪು ನೀರು ಹಾಕಿಕೊಂಡು ಉಪ್ಪಿನಕಾಯಿ ರಸ ಸಿದ್ಧಗೊಳಿಸಿ. ಈ ಮಿಶ್ರಣಕ್ಕೆ ಹೋಳುಗಳನ್ನು ಹಾಕಿಕೊಂಡು ತಿರುವಿ. ಇದನ್ನು ಗಾಳಿಯಾಡದ ಪಾತ್ರೆಯಲ್ಲಿ ಹಾಕಿ ಫ್ರಿಡ್ಜ್ ನಲ್ಲಿಟ್ಟರೆ ಒಂದು ತಿಂಗಳವರೆಗೂ ಬಳಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ