* ಒಂದು ಅನಾನಸ್ (ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಎರಡು ಕಪ್ ಅನಾನಸ್ ರಸ)
* ಏಲಕ್ಕಿ ಪುಡಿ ಒಂದು ಟೀ ಚಮಚ
* ತುಪ್ಪ ನಾಲ್ಕು ಟೀ ಚಮಚ
ತಯಾರಿಸುವ ವಿಧಾನ :
ಒಂದು ದಪ್ಪ ತಳದ ಪಾತ್ರೆಯಲ್ಲಿ ಅನಾನಸ್ ಹಣ್ಣಿನ ರಸ, ಸಕ್ಕರೆ ಮತ್ತು ತೆಂಗಿನಕಾಯಿ ತುರಿಯನ್ನು ಹಾಕಿ ಮಧ್ಯಮ ಗಾತ್ರದ ಉರಿಯಲ್ಲಿ ಕೈಯೈಡಿಸುತ್ತಾ ಇರಬೇಕು. (ತೆಂಗಿನಕಾಯಿ ತುರಿಯನ್ನು ಬೇಕಿದ್ದರೆ ಮಿಕ್ಸಿ ಜಾರಿಗೆ ಹಾಕಿ ಒಂದು ಸುತ್ತು ತಿರುಗಿಸಬಹುದು.) ಅದು ಗಟ್ಟಿಯಾಗುತ್ತಾ ಬರುವಾಗ ಏಲಕ್ಕಿ ಪುಡಿಯನ್ನು ಹಾಕಬೇಕು. ನಂತರ ತುಪ್ಪವನ್ನು ಹಾಕಬೇಕು. ಅಗ ಬಾಣಲೆಗೆ ಅಂಟಿಕೊಳ್ಳುವುದಿಲ್ಲ. ಬಾಣಲೆಯನ್ನು ಬಿಟ್ಟು ಬರುವಾಗ ಒಂದು ತುಪ್ಪ ಸವರಿದ ತಟ್ಟೆಗೆ ಹಾಕಬೇಕು. ನಂತರ ಸಮತಟ್ಟಾಗಿ ಮಾಡಬೇಕು. ನಂತರ ಐದು ನಿಮಿಷಗಳ ನಂತರ ಚೌಕಾಕಾರವಾಗಿ ಕತ್ತರಿಸಬೇಕು. ಈಗ ರುಚಿಯಾದ ಕೊಬ್ಬರಿ ಮಿಠಾಯಿ ಸವಿಯಲು ಸಿದ್ಧ.