ಭಾರತೀಯ ಅಡುಗೆಯಲ್ಲಿ ತನ್ನ ಚಮತ್ಕಾರವನ್ನು ತೋರುವ ಏಲಕ್ಕಿ, ಆಯುರ್ವೇದದಲ್ಲಿ ದಿವ್ಯೌಷಧವಾಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಇದರ ಬಳಕೆಯನ್ನು ಕೇವಲ ಪರಿಮಳಕ್ಕಾಗಿ ಮಾತ್ರವಲ್ಲ ದೈಹಿಕ ಸ್ವಾಸ್ಥ್ಯಕ್ಕೂ ಏಲಕ್ಕಿ ಪರಿಣಾಮಕಾರಿಯಾಗಿದೆ.
ನೀವು ಪ್ರತಿ ದಿನ ಕುಡಿಯಪಲ ಟೀ ಯಲ್ಲಿ ಏಲಕ್ಕಿ ಬೆರೆಸುವ ಮೂಲಕ ಇದು ರುಚಿಕರವಾಗುವುದು ಮಾತ್ರವಲ್ಲ, ಆರೋಗ್ಯಕರವೂ ಆಗುತ್ತದೆ.
- ಫ್ರೀ ರ್‍ಯಾಡಿಕಲ್ ಕಣಗಳನ್ನು ಕೊಲ್ಲುತ್ತದೆ
ಏಲಕ್ಕಿ ಚಹಾದರಲ್ಲಿರುವ ಹಲವಾರು ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಕೊಲ್ಲಲು ಸಕ್ಷಮವಾಗಿವೆ.
- ಜೀರ್ಣಕ್ರಿಯೆಗೆ ಉತ್ತಮ
ಆಯುರ್ವೇದದ ಪ್ರಕಾರ, ಊಟದ ನಂತರ ಏಲಕ್ಕಿಯ ಸೇವನೆಯಿಂದ ಜೀರ್ಣಕ್ರಿಯೆ ಸರಾಗವಾಗಿ ಜರುಗುತ್ತದೆ. ಅನಾರೋಗ್ಯಕರ ಸಿದ್ಧ ಆಹಾರಗಳ ಸೇವನೆಯಿಂದ ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳಬಹುದು. ಆದ್ದರಿಂದ ವಾಯುಪ್ರಕೋಪ ಹಾಗೂ ಆಮ್ಲೀಯತೆಯನ್ನು ಕಡಿಮೆಗೊಳಿಸಲು ಊಟದ ಬಳಿಕ ಏಲಕ್ಕಿ ಟೀ ಕುಡಿಯುವುದು ಉತ್ತಮ.
- ತಲೆನೋವನ್ನು ಕಡಿಮೆ ಮಾಡುತ್ತದೆ
ಏಲಕ್ಕಿ ಚಹಾದಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ ಹಾಗೂ ದೇಹದ ಒತ್ತಡವನ್ನು ನಿವಾರಿಸುತ್ತದೆ. ಬಿಸಿಬಿಸಿ ಏಲಕ್ಕಿ ಟೀ ಕುಡಿದ ಬಳಿಕ ತಲೆನೋವು ಕಡಿಮೆಯಾಗುತ್ತದೆ.
- ವಿಷಕಾರಿ ವಸ್ತುಗಳನ್ನು ವಿಸರ್ಜಿಸಲು ನೆರವಾಗುತ್ತದೆ
ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳಬೇಕಾದರೆ ದೇಹದಿಂದ ಕಲ್ಮಶಗಳು ಹೊರಹೋಗುವುದು ಅವಶ್ಯವಾಗಿದೆ. ಏಲಕ್ಕಿ ಟೀ ಸೇವನೆಯಿಂದ ಯಕೃತ್ ಇನ್ನೂಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಚೋದನೆ ದೊರಕುತ್ತದೆ ಹಾಗೂ ವಿಷಕಾರಿ ವಸ್ತುಗಳ ವಿಸರ್ಜನೆ ಪರಿಣಾಮಕಾರಿಯಾಗಿ ಜರುಗುತ್ತದೆ.
- ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ
ನಿತ್ಯವೂ ಒಂದು ಅಥವಾ ಎರಡು ಕಪ್ ಏಲಕ್ಕಿ ಟೀ ಕುಡಿಯುವ ಮೂಲಕ ದೇಹದಲ್ಲಿ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ನಿಯಮಿತ ಸೇವನೆಯಿಂದ ದೇಹದ ಇತರ ಪ್ರಮುಖ ಅಂಗಗಳು ಸಹಾ ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಇದರಲ್ಲಿರುವ ಕಬ್ಬಿಣದ ಅಂಶ ರಕ್ತದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ ಹಾಗೂ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸಲು ನೆರವಾಗುತ್ತದೆ.
- ಹಲ್ಲು ನೋವಿಗೆ ಉತ್ತಮ
ಏಲಕ್ಕಿಯಲ್ಲಿ ನೈಸರ್ಗಿಕವಾದ ಬ್ಯಾಕ್ಟೀರಿಯಾ ನಿವಾರಕ ಗುಣವಿದೆ ಹಾಗೂ ಈ ಗುಣ ಹಲ್ಲುಗಳ ಸಂದುಗಳಲ್ಲಿ ಬೆಳೆಯುತ್ತಿರುವ ಬ್ಯಾಕ್ಟೀರಿಯಾಗಳನ್ನು ಕೊಂದು ಸ್ವಚ್ಛತೆಯನ್ನು ಕಾಪಾಡುತ್ತದೆ. ಊಟದ ಬಳಿಕ ಒಂದು ಕಪ್ ಏಲಕ್ಕಿ ಟೀ ಕುಡಿಯುವ ಮೂಲಕ ಉಸಿರಿನ ದುರ್ವಾಸನೆ ಇಲ್ಲವಾಗಿಸಬಹುದು ಹಾಗೂ ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು. ಏಲಕ್ಕಿಯ ಗುಣಗಳು ಹಲ್ಲುಗಳನ್ನು ಬಿಳಿಯಾಗಿಸಲು ಹಾಗೂ ಊಟದ ಬಳಿಕ ಬಹುಕಾಲದವರೆಗೆ ದುರ್ವಾಸನೆ ಇಲ್ಲದಂತೆ ನೋಡಿಕೊಳ್ಳಬಹುದು
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.