Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿಹಿಯಾದ ಮಾವಿನಹಣ್ಣಿನ ಲಡ್ಡು

ಸಿಹಿಯಾದ ಮಾವಿನಹಣ್ಣಿನ ಲಡ್ಡು
ಬೆಂಗಳೂರು , ಗುರುವಾರ, 2 ಜುಲೈ 2020 (10:20 IST)
Normal 0 false false false EN-US X-NONE X-NONE

ಬೆಂಗಳೂರು : ಮಾವಿನ ಹಣ್ಣನ್ನು ಎಲ್ಲರೂ ಇಷ್ಟಪಡುತ್ತಾರೆ. ಇದರಿಂದ ಹಲವು ಬಗೆಯ ಸಿಹಿತಿಂಡಿಗಳನ್ನು ಮಾಡಬಹುದು. ಅದೇರೀತಿ ಅದರಿಂದ ಲಡ್ಡು ಕೂಡ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.
 

ಬೇಕಾಗುವ ಸಾಮಾಗ್ರಿಗಳು : ಮಾವಿನ ಹಣ್ಣಿನ ತಿರುಳು 1 ಕಪ್, ಹಾಲು 1 ಕಪ್ , ಒಣ ಕೊಬ್ಬರಿ ತುರಿ 1 ಕಪ್, ಏಲಕ್ಕಿ ಪುಡಿ ಸ್ವಲ್ಪ, ಗೋಡಂಬಿ, ಪಿಸ್ತಾ ½ ಕಪ್.

ಮಾಡುವ ವಿಧಾನ : ಮೊದಲಿಗೆ ಒಂದು ಬಾಣಲೆಯಲ್ಲಿ ಕೊಬ್ಬರಿ ತುರಿಯನ್ನು ತೆಗೆದುಕೊಂಡು ಚೆನ್ನಾಗಿ ಹುರಿಯಿರಿ. ಅದಕ್ಕೆ ಮಾವಿನ ತಿರುಳನ್ನು ಹಾಕಿ. ಅದನ್ನು ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ ಹಾಲು, ಡ್ರೈಫುಡ್ಸ್ , ಏಲಕ್ಕಿ ಪುಡಿ ಸೇರಿಸಿ ಕಲಸಿ ತಳ ಹಿಡಿಯದಂತೆ ಕೈಯಾಡಿಸುತ್ತೀರಿ. ಈ ಮಿಶ್ರಣ ಮುದ್ದೆಯಂತಾದಾಗ  ಕೆಳಗಿಳಿಸಿ ತಣ್ಣಗಾದ ಮೇಲೆ ಕೈಗೆ ತುಪ್ಪ ಸವರಿಕೊಂಡು ಉಂಡೆ ಮಾಡಿದರೆ ಮಾವಿನ ಲಡ್ಡು ರೆಡಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಮೇಕಪ್ ತೆಗೆಯಲು ರಿಮೂವರ್ ಬಳಸುವ ಬದಲು ಇದನ್ನು ಹಚ್ಚಿ