Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಡುಗೆ ಸೋಡಾದ 4 ಅದ್ಭುತ ಉಪಯೋಗಗಳು

ಅಡುಗೆ ಸೋಡಾದ 4 ಅದ್ಭುತ ಉಪಯೋಗಗಳು
ಬೆಂಗಳೂರು , ಮಂಗಳವಾರ, 9 ಜನವರಿ 2018 (18:00 IST)
ಸೋಡಿಯಂ ಬೈಕಾರ್ಬನೇಟ್ ಅಥವಾ ಅಡಿಗೆ ಸೋಡಾವು ಮಾಂತ್ರಿಕ ಪದಾರ್ಥವಾಗಿದ್ದು, ಯಾವುದೇ ಹಾನಿಕಾರಕ ಅಡ್ಡಪರಿಣಾಮಗಳು ಇಲ್ಲದೇ ಲೆಕ್ಕವಿಲ್ಲದಷ್ಟು ರೀತಿಯಲ್ಲಿ ನಿಮಗೆ ಸಹಾಯ ಮಾಡುತ್ತದೆ. ಇಂತಹ ಅಡುಗೆ ಸೋಡಾದ ಉಪಯೋಗಗಳನ್ನು ನೋಡೋಣ
1. ಅತ್ಯುತ್ತಮ ನೈಸರ್ಗಿಕ ಕಿಚನ್ ಕ್ಲೀನರ್
ಅಡುಗೆ ಸೋಡಾ ಯಾವುದೇ ಸೋಪ್‌ಗಿಂತ ಹತ್ತು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಒಂದು ಸ್ಪಾಂಜ್ ಅಥವಾ ಒದ್ದೆಯಾದ ಬಟ್ಟೆಯ ಮೇಲೆ ಸ್ವಲ್ಪ ಅಡಿಗೆ ಸೋಡಾವನ್ನು ಸಿಂಪಡಿಸಿ ಬಳಸಿ. 
 
- ಮೈಕ್ರೋವೇವ್ ಮತ್ತು ಓವನ್‌ಗಳನ್ನು ಸ್ವಚ್ಛಗೊಳಿಸುತ್ತದೆ
- ಕಾಫಿ / ಟೀ ಕಲೆಗಳನ್ನು ತೆಗೆದುಹಾಕುತ್ತದೆ
- ಸ್ವಿಚ್‌ಬೋರ್ಡ್‌‌ಗಳನ್ನು ಸ್ವಚ್ಛಗೊಳಿಸುತ್ತದೆ
- ಪಾತ್ರೆಗಳಿಂದ ವಾಸನೆಯನ್ನು ತೆಗೆದುಹಾಕುವುದು
- ಸುಟ್ಟ ಮಡಿಕೆಗಳು ಮತ್ತು ಬಾಣಲೆಗಳನ್ನು ಸ್ವಚ್ಛಗೊಳಿಸುತ್ತದೆ
- ರೆಫ್ರಿಜಿರೇಟರ್‌ನಿಂದ ಕಲೆಗಳನ್ನು ತೆಗೆದುಹಾಕುತ್ತದೆ
- ಹಣ್ಣುಗಳು ಮತ್ತು ತರಕಾರಿಗಳಿಂದ ಕೀಟನಾಶಕಗಳನ್ನು ಹೊರತೆಗೆಯುತ್ತದೆ
 
2. ಬಟ್ಟೆಗಳ ಮೇಲಿನ ಕಲೆಗೆ ಅತ್ಯುತ್ತಮ
ಪರಿಣಾಮಕಾರಿ ಫಲಿತಾಂಶಗಳನ್ನು ಪಡೆಯಲು ನಿಮ್ಮ ಡಿಟರ್ಜೆಂಟ್‌ ಜೊತೆಗೆ ಅಡುಗೆ ಸೋಡಾವನ್ನು ಸೇರಿಸಿ. ನೀವು ಅಡುಗೆ ಸೋಡಾವನ್ನು ನೇರವಾಗಿ ನಿಮ್ಮ ವಾಶಿಂಗ್ ಮಶಿನ್‌ನಲ್ಲಿ ಬಳಸಬಹುದು:
 
- ನಿಮ್ಮ ಉಡುಪುಗಳಿಂದ ಕೆಟ್ಟ ವಾಸನೆ ಮತ್ತು ಸೋಂಕನ್ನು ತೆಗೆದುಹಾಕುತ್ತದೆ
- ಗ್ರೀಸ್ ಕಲೆಗಳನ್ನು ತೆಗೆದುಹಾಕುತ್ತದೆ
- ಇಂಕ್ ಮತ್ತು ವೈನ್ ಕಲೆಗಳನ್ನು ತೆಗೆದುಹಾಕುತ್ತದೆ
- ಹಳದಿ ಕಲೆಗಳನ್ನು ತೆಗೆದುಹಾಕುತ್ತದೆ
 
3. ಅತ್ಯುತ್ತಮ ಹೌಸ್ ಕ್ಲೀನರ್
ಒದ್ದೆಯಾದ ಬಟ್ಟೆಯ ಮೇಲೆ ಚಿಮುಕಿಸಿದ ಸ್ವಲ್ಪ ಅಡಿಗೆ ಸೋಡಾ ನಿಮ್ಮ ಮನೆ ಮತ್ತು ಎಲ್ಲವನ್ನೂ ಹೊಳೆಯುವಂತೆ ಮಾಡುತ್ತದೆ. ನೀವು ಇದನ್ನು ಸ್ಪ್ರೇ ಅಥವಾ ಸ್ಕ್ರಬ್ ಆಗಿ ಬಳಸಬಹುದು:
 
- ಕಾರುಗಳನ್ನು ಸ್ವಚ್ಛಗೊಳಿಸುತ್ತದೆ
- ಶೂಗಳ ಕೆಟ್ಟ ವಾಸನೆಯನ್ನು ತೆಗೆದುಹಾಕುತ್ತದೆ
- ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತದೆ
- ಮರದ ಪೀಠೋಪಕರಣಗಳಿಂದ ಕಲೆಗಳನ್ನು ತೆಗೆದುಹಾಕುತ್ತದೆ
- ಆಭರಣಗಳನ್ನು ಸ್ವಚ್ಛಗೊಳಿಸುತ್ತದೆ
- ಗೋಡೆಗಳಿಂದ ಕ್ರೆಯೋನ್/ಇಂಕ್/ಶಾಶ್ವತ ಮಾರ್ಕರ್ ಕಲೆಗಳನ್ನು ತೆಗೆದುಹಾಕುತ್ತದೆ
 
4. ಹಲ್ಲಿನ ತೊಂದರೆಗಳಿಗೆ ಅತ್ಯುತ್ತಮ
ನಿಮ್ಮ ಹಲ್ಲುಗಳು ಮತ್ತು ಒಸಡುಗಳ ಆರೋಗ್ಯದಲ್ಲಿನ ಆಶ್ಚರ್ಯಕರ ಬದಲಾವಣೆಗಳಿಗೆ ಸಾಕ್ಷಿಯಾಗುವಂತೆ ನಿಮ್ಮ ಹಲ್ಲಿನ ಆರೈಕೆ ದಿನಚರಿಗೆ ಅಡಿಗೆ ಸೋಡಾ ಸೇರಿಸಿ.
 
- ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ
- ಹಲ್ಲು ಹಳದಿಗಟ್ಟುವಿಕೆಯನ್ನು ತಡೆಯುತ್ತದೆ
- ಹಣ್ಣು ಮತ್ತು ಮದ್ಯದ ಕಲೆಗಳನ್ನು ತೆಗೆದುಹಾಕುತ್ತದೆ
- ಜಿಂಗೈವಿಟಿಸ್ ತಡೆಯುತ್ತದೆ
- ಬಾಯಿ ಹುಣ್ಣು ಕಡಿಮೆ ಮಾಡುತ್ತದೆ
-  ಹಲ್ಲುಗಳನ್ನು ಶುದ್ಧ ಮತ್ತು ಬಿಳಿಯಾಗಿಸುತ್ತದೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾದಿಷ್ಠವಾದ ಅಂಜಲ್ ಫಿಶ್‌ ಫ್ರೈ