ಬೇಕಾಗುವ ಸಾಮಗ್ರಿಗಳು -
1 ಕಪ್ ಬಿಳಿ ಎಳ್ಳು
1 ಕಪ್ ಪುಡಿ ಮಾಡಿದ ಬೆಲ್ಲ
ಸ್ವಲ್ಪ ತುಪ್ಪ
ಮಾಡುವ ವಿಧಾನ:
- ಬಿಳಿ ಎಳ್ಳನ್ನು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ.
- ನಂತರ ಅದನ್ನು ತೆಗೆದು ಬಾಣಲೆಗೆ ಸ್ವಲ್ಪ ನೀರು ಹಾಕಿಕೊಳ್ಳಿ. ಅದಕ್ಕೆ ಬೆಲ್ಲ ಹಾಕಿ ಕರಗಿಸಿಕೊಳ್ಳಿ. ಬೆಲ್ಲ ನೊರೆ ಬರುತ್ತಿರುವಾಗ ಪಾಕ ಹದವಾಗಿದೆಯೇ ಎಂದು ನೋಡಲು ಸಣ್ಣ ಬೌಲ್ ನಲ್ಲಿ ಸ್ವಲ್ಪ ನೀರು ಹಾಕಿ ಅದಕ್ಕೆ ಸ್ವಲ್ಪ ಬೆಲ್ಲ ಹಾಕಿ ಕೈಯಲ್ಲಿ ಮುಟ್ಟಿದಾಗ ಕೈಗೆ ಬೆಲ್ಲ ಉಂಡೆಯ ಆಕಾರದಲ್ಲಿ ಬಂದರೆ ಚೆನ್ನಾಗಿ ಹದವಾಗಿದೆಯೆಂದು ಅರ್ಥ. ಆಗ ಹುರಿದಿಟ್ಟುಕೊಂಡ ಎಳ್ಳನ್ನು ಬೆಲ್ಲದ ಪಾಕಕ್ಕೆ ಹಾಕಿ ಚೆನ್ನಾಗಿ ಉಂಡೆ ಕಟ್ಟದಂತೆ ಸೌಟಿನಿಂದ ಕೈಯಾಡಿಸಿ.
- ಪಾಕ ಗಟ್ಟಿಯಾದಾಗ ಅದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ ತೆಳುವಾಗಿ ಹರಡಿಕೊಳ್ಳಿ. ನಂತರ ಅದು ಸುಮಾರು ಬಿಸಿಯಿರುವಾಗಲೇ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.
- ಎಳ್ಳು ಉಂಡೆ ಬೇಕೆಂದರೆ ಇದನ್ನೇ ಪಾಕ ಬಿಸಿಯಾಗಿರುವಾಗ ಉಂಡೆ ಕಟ್ಟಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.