ಮಾಂಸಾಹಾರ ಪ್ರಿಯರಿಗೆ ಸವಿಯಲು ಬಗೆ ಬಗೆಯ ರುಚಿಕರ ಖಾದ್ಯಗಳಿವೆ. ನಾನ್ವೆಜ್ ಅಡುಗೆಯಲ್ಲಿ ಬಗೆ ಬಗೆಯ ತಿನಿಸುಗಳಿವೆ.
ಚಿಕನ್ ಮಂಚೂರಿಯನ್ ಸರಳವಾಗಿ ಮಾಡುವ ಅಡುಗೆಯಲ್ಲಿ ಒಂದಾಗಿದೆ. ಈ ಅಡುಗೆಗೆ ಹೆಚ್ಚಿನ ಸಮಯ, ಪರಿಶ್ರಮವೂ ಅಗತ್ಯವಿಲ್ಲ. ಅಡುಗೆಯಲ್ಲಿ ಹೊಸ ಪ್ರಯತ್ನ ಮಾಡುವವರಿಗೂ ಇದು ಕಷ್ಟವೆನಿಸುವುದಿಲ್ಲ. ಈ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಚಿಕನ್ ಮಂಚೂರಿಯನ್ ಮಾಡಿ, ಅದರ ರುಚಿ ಸವಿದು ಎಂಜಾಯ್ ಮಾಡಿ.
ಬೇಕಾಗುವ ಸಾಮಗ್ರಿಗಳು
* ಕೋಳಿ ಮಾಂಸ (ಮೂಳೆ ಇಲ್ಲದ್ದು) – 1/2 ಕೆಜಿ
* ಕಾರ್ನ್ ಫ್ಲೋರ್ – 1 ಕಪ್ *ಮೊಟ್ಟೆಗಳು – 2
* ಹಸಿ ಮೆಣಸಿನ ಕಾಯಿ -4
* ಸೋಯಾ ಸಾಸ್ – 3 ಚಮಚ
* ಟೊಮೆಟೋ ಸಾಸ್ – 2 ಚಮಚ
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
* ಬೆಳ್ಳುಳ್ಳಿ – 4 ತುಂಡು
* ಶುಂಠಿ – ಸ್ವಲ್ಪ
* ದಪ್ಪ ಮೆಣಸಿನಕಾಯಿ –
* ಅಡುಗೆಎಣ್ಣೆ – 1 ಕಪ್
* ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
* ಒಂದು ಪಾತ್ರೆಯಲ್ಲಿ ಕಾರ್ನ್ ಫ್ಲೋರ್, ಮೊಟ್ಟೆ, ಹಸಿ ಮೆಣಸಿನ ಕಾಯಿ, ಉಪ್ಪು ಮತ್ತು ಶುಂಠಿ ಬೆಳ್ಳುಳ್ಳಿಗಳ ಪೇಸ್ಟನ್ನು ಹಾಕಿ ಅದಕ್ಕೆ 1/2 ಲೋಟ ಬಿಸಿ ನೀರನ್ನು ಬೆರೆಸಿ ಚೆನ್ನಾಗಿ ಕಲೆಸಿಕೊಳ್ಳಬೇಕು.
* ಮತ್ತೊಂದು ಪಾತ್ರೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಕೋಳಿ ಮಾಂಸದ ತುಂಡುಗಳನ್ನು ಈ ಮೊದಲು ತಯಾರಿಸಿದ ಮಿಶ್ರಣದಲ್ಲಿ ಚೆನ್ನಾಗಿ ನೆನೆಸಿ ಎಣ್ಣೆಯಲ್ಲಿ ಅವುಗಳನ್ನು ಬಿಡಿ. ಈಗ ಕೋಳಿ ಮಾಂಸದ ತುಂಡುಗಳನ್ನು ಡೀಪ್ ಫ್ರೈ ಮಾಡಿ.
* ತದನಂತರ ಅಡುಗೆ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಬಿಸಿಯಾಗಲು ಬಿಡಿ, ಇದರ ಮೇಲೆ ಶುಂಠಿ ಮತ್ತು ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ, ಸೋಯಾ ಸಾಸ್, ಟೊಮೆಟೋ ಸಾಸ್, 1 ಕಪ್ ನೀರು ಹಾಕಿ ಮತ್ತು ನಂತರ ಫ್ರೈ ಮಾಡಿದ ಕೋಳಿ ಮಾಂಸದ ತುಂಡುಗಳನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಫ್ರೈ ಮಾಡಿದರೆ ರುಚಿಯಾದ ಚಿಕನ್ ಮಂಚೂರಿ ಸವಿಯಲು ಸಿದ್ಧವಾಗುತ್ತದೆ.