ಒಡಿಶಾ: ಹಲ್ಲೆ ಆರೋಪದಲ್ಲಿ ಬಂಧಿತರಾಗಿರುವ ನಾಲ್ವರು ಆರೋಪಿಗಳ ಮುಖವನ್ನು ಮರೆಮಾಚಲು ಪೊಲೀಸರು ಬಳಸಿದ ಕ್ರಿಯೇಟಿವಿಟಿ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
ಸಾಮಾನ್ಯವಾಗಿ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದಾಗ ಅವರ ಮುಖಗಳನ್ನು ಮರೆಮಾಚಲಾಗುತ್ತದೆ. ಇದು ಪೊಲೀಸ್ ಇಲಾಖೆಯಲ್ಲಿರುವ ನಿಯಮ.
ಈಚೆಗೆ ಹಲ್ಲೆ ಪ್ರಕರಣ ಸಂಬಂಧ ಬಹರಾಂಪುರ್ ಜಿಲ್ಲಾ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದರು. ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿಲು ಆರೋಪಿಗಳ ಮುಖವನ್ನು ಮರೆಮಾಚಲು ಅವರ ಮುಖಸ್ಥಿತಿ ಬಿಂಬಿಸುವ ಎಮೋಜಿಗಳನ್ನು ಬಳಸಿದ್ದು ಭಾರೀ ಮೆಚ್ಚುಗೆ ಪಾತ್ರವಾಗಿದೆ.
ಎಕ್ಸ್‌ನಲ್ಲಿ ಪೊಲೀಸರು ಹಂಚಿಕೊಂಡ ಚಿತ್ರಕ್ಕೆ ಪ್ರತಿಕ್ರಿಯಿಸಿದ ಜನರು, "AI ಕೂಡ ಇಷ್ಟರ ಮಟ್ಟಿಗೆ ಸೃಜನಶೀಲವಾಗಿರಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.