Publish Date: Fri, 22 Apr 2022 (09:30 IST)
Updated Date: Fri, 22 Apr 2022 (09:37 IST)
ಲಕ್ನೋ: ಆನ್ ಲೈನ್ ನಲ್ಲಿ ಲೂಡೋ ಆಡುತ್ತಾ ಪರಿಚಯವಾದ ಹುಡುಗಿ ಜೊತೆ 19 ವರ್ಷದ ಯುವಕನಿಗೆ ಪ್ರೀತಿಯಾಗಿ ಓಡಿ ಹೋದ ಘಟನೆ ನಡೆದಿದೆ.
ಬಿಹಾರ ಮೂಲದ ಯುವಕನಿಗೆ ಉತ್ತರ ಪ್ರದೇಶದ ಯುವತಿಯೊಂದಿಗೆ ಪ್ರೇಮವಾಗಿತ್ತು. ಆತನನ್ನು ಭೇಟಿಯಾಗಲು ಯುವತಿ ಮನೆ ಬಿಟ್ಟಿದ್ದಳು. ಈ ಬಗ್ಗೆ ಯುವತಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಇದೇ ವೇಳೆ ಯುವಕನೂ ಮನೆಯಿಂದ ನಾಪತ್ತೆಯಾಗಿದ್ದ ಬಗ್ಗೆ ಆತನ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.
ಕೊನೆಗೆ ವಿಶೇಷ ಪಡೆ ರಚಿಸಿ ಯುವ ಜೋಡಿಯ ಪತ್ತೆ ಮಾಡಿದ ಪೊಲೀಸರು ಯುವತಿಯನ್ನು ರಕ್ಷಿಸಿ, ಯುವಕನನ್ನು ಬಂಧಿಸಿದ್ದಾರೆ.
Krishnaveni K
Publish Date: Fri, 22 Apr 2022 (09:30 IST)
Updated Date: Fri, 22 Apr 2022 (09:37 IST)