Publish Date: Thu, 21 Apr 2022 (07:20 IST)
Updated Date: Thu, 21 Apr 2022 (07:40 IST)
ಹೈದರಾಬಾದ್: 13 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರವೆಸಗಿ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳುವ ಯತ್ನ ಆಂಧ್ರದಲ್ಲಿ ನಡೆದಿದೆ.
8 ತಿಂಗಳಿಂದ ಬಾಲಕಿ ಮೇಲೆ ಸುಮಾರು 80 ಮಂದಿ ಅತ್ಯಾಚಾರವೆಸಗಿದ್ದಾರೆ. ಈ ಸಂಬಂಧ ವಿದ್ಯಾರ್ಥಿ ಸೇರಿದಂತೆ ಒಟ್ಟು 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ತಾಯಿ ಕೊವಿಡ್ ನಿಂದಾಗಿ ತೀರಿಕೊಂಡಿದ್ದರು. ಅದಾದ ಬಳಿಕ ಆಸ್ಪತ್ರೆಯಲ್ಲೇ ಬಾಲಕಿಯ ಪರಿಚಯ ಮಾಡಿಕೊಂಡಿದ್ದ ಮಹಿಳೆಯೊಬ್ಬರು ತಂದೆಗೂ ತಿಳಿಸದೇ ಕರೆದುಕೊಂಡು ಹೋಗಿದ್ದರು. ಹೀಗಾಗಿ ತಂದೆ ಬಾಲಕಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು. ಜೊತೆಗೆ ಕರೆದುಕೊಂಡು ಹೋಗಿದ್ದ ಮಹಿಳೆ ವಿವಿಧ ಕಡೆಗೆ ಬಾಲಕಿಯನ್ನು ಸಾಗಿಸಿ ವೇಶ್ಯಾವಾಟಿಕೆಗೆ ತಳ್ಳಲಾಗಿತ್ತು.
Krishnaveni K
Publish Date: Thu, 21 Apr 2022 (07:20 IST)
Updated Date: Thu, 21 Apr 2022 (07:40 IST)