Publish Date: Sat, 27 Mar 2021 (08:17 IST)
Updated Date: Sat, 27 Mar 2021 (08:18 IST)
ಆಗ್ರಾ : ಉತ್ತರ ಪ್ರದೇಶದ ಆಗ್ರಾದ ಹರಿ ಪರ್ವತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಖಂಡಾರಿ ಪ್ರದೇಶದಲ್ಲಿ 28 ವರ್ಷದ ಯುವಕನ ಮೇಲೆ ಆತನ ಗೆಳತಿ ಆಸಿಡ್ ದಾಳಿ ನಡೆಸಿದ್ದಾಳೆ.
ಸಂತ್ರಸ್ತ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು. ಆದರೆ ಸಂತ್ರಸ್ತನಿಗೆ ಆತನ ಪೋಷಕರು ಬೇರೊಬ್ಬ ಮಹಿಳೆಯ ಜೊತೆ ಮದುವೆ ನಿಶ್ವಯ ಮಾಡಿದ್ದರು. ಇದಕ್ಕೆ ಆತ ಕೂಡ ಒಪ್ಪಿಕೊಂಡಿದ್ದನು. ಇದರಿಂದ ಆರೋಪಿ ಮಹಿಳೆ ಅಸಮಾಧಾನಗೊಂಡಿದ್ದು, ಆತನನ್ನು ಮನೆಗೆ ಕರೆಸಿ ಜಗಳವಾಡಿದ್ದಾಳೆ. ಆ ವೇಳೆ ಆತನ ಮುಖಕ್ಕೆ ಆಸಿಡ್ ಎರಚಿದ್ದಾಳೆ.
ಸಂತ್ರಸ್ತನ 80ರಷ್ಟು ಸುಟ್ಟು ಹೋಗಿದ್ದು .ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.