Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಸಿದ್ಧರಾಮಯ್ಯ ಮೇಲೆ ನನ್ನ ಗೌರವ ಕಡಿಮೆಯಾಗಿದೆ ಎಂದ ರಮೇಶ್ ಜಾರಕಿಹೊಳಿ ಹೇಳಿಕೆಗೆ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ನಾನು ವಿರೋಧ ಪಕ್ಷದ ನಾಯಕ. ನಾನು ಸತ್ಯವನ್ನು ಹೇಳಬೇಕಾಗುತ್ತೆ. ರಮೇಶ್ ಅಣತಿಯಂತೆ ಮಾತನಾಡಲು ಆಗಲ್ಲ. ರಮೇಶ್ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಮಹಾನಾಯಕರು ಬಹಳಷ್ಟಿದ್ದಾರೆ. ಬಿಜೆಪಿ, ನಮ್ಮ ಪಕ್ಷದಲ್ಲೂ ಇದ್ದಾರೆ. ಮಹಾ ನಾಯಕಿನೂ ಇದ್ದಾರೆ. ಮಹಾ ನಾಯಕ ಯಾರು ನನಗೆ ಗೊತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.