ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಚಿತ್ರ ಬರೆದ ತಪ್ಪಿಗೆ ಮುಸ್ಲಿಂ ಮಹಿಳೆಯೊಬ್ಬಳನ್ನು ಗಂಡನ ಮನೆಯವರು ಮನೆಯಿಂದ ಹೊರಗಟ್ಟಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಿಕಂದರ್ ಪುರ್ ಎಂಬಲ್ಲಿ ನಗ್ಮಾ ಪರ್ವೀನ್ ಎಂಬಾಕೆ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಚಿತ್ರವನ್ನು ಕಳೆದ ನವಂಬರ್ ನಲ್ಲಿ ಬರೆದಿದ್ದಳು. ಇದೇ ಕಾರಣಕ್ಕೆ ಆಕೆಯ ಗಂಡನ ಮನೆಯವರು ಪರ್ವೀನ್ ಗೆ ಥಳಿಸಿ ಮನೆಯಿಂದ ಹೊರ ಹಾಕಿದ್ದರೆಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ತಾನು ಮಾನಸಿಕ ಸಮತೋಲನ ಕಳೆದುಕೊಂಡಿದ್ದೆ. ಅದೇ ಕಾರಣಕ್ಕೆ ಇವರಿಬ್ಬರ ಚಿತ್ರ ಬರೆದಿದ್ದೆ ಎಂದು ಗಂಡನ ಮನೆಯವರು ಆರೋಪಿಸಿದ್ದಾಗಿ ಆಕೆ ಪೊಲೀಸರಿಗೆ ದೂರಿದ್ದಾಳೆ. ಇದೀಗ ಗಂಡನ ಮನೆಯವರ ವಿರುದ್ಧ ಪ್ರಕರಣ ದಾಖಲಾಗಿದೆ.