ನವದೆಹಲಿ: ದೇಶದ ಮೊದಲ ರಕ್ಷಣಾ ಸಚಿವರಾಗಿ ನೇಮಕಗೊಂಡಿರುವ ನಿರ್ಮಲಾ ಸೀತಾರಾಮ್ ಇದರ ಬೆನ್ನಲ್ಲೇ ಹೊಸ ನಿರ್ಧಾರ ತಳೆದಿದ್ದಾರೆ.
ಭಾರತದ ಸೇನಾ ಪೊಲೀಸ್ ಪಡೆಗೆ ಸುಮಾರು 800 ಮಹಿಳಾ ಅಧಿಕಾರಿಗಳನ್ನು ನೇಮಿಸಲು ಸಚಿವೆ ನಿರ್ಮಲಾ ಸೀತಾರಾಮ್ ನಿರ್ಧರಿಸಿದ್ದಾರೆ. ಹಂತ ಹಂತವಾಗಿ ಗಲಭೆ ಪೀಡಿತ ಕಾಶ್ಮೀರ ಕಣಿವೆಯಲ್ಲಿ ಮಹಿಳಾ ಅಧಿಕಾರಿಗಳನ್ನು ನೇಮಿಸುವುದಾಗಿ ಸೇನಾ ಮೂಲಗಳು ಹೇಳಿವೆ.
ದೇಶದ ಮೊದಲ ರಕ್ಷಣಾ ಸಚಿವರಾಗಿ ನಿರ್ಮಲಾ ಸೀತಾರಾಮ್ ಅಧಿಕಾರ ಸ್ವೀಕರಿಸಿದ ಮರುದಿನವೇ ಸೇನೆ ಇಂತಹದ್ದೊಂದು ನಿರ್ಧಾರ ಕೈಗೊಂಡಿದೆ. ಸದ್ಯಕ್ಕೆ ಮಹಿಳೆಯರಿಗೆ ಸೇನೆಯಲ್ಲಿ ವೈದ್ಯಕೀಯ, ಕಾನೂನಾತ್ಮಕ ಮತ್ತು ತಾಂತ್ರಿಕ ವಿಭಾಗದಲ್ಲಿ ಮಾತ್ರ ಉದ್ಯೋಗ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ರಕ್ಷಣಾ ವಿಭಾಗದಲ್ಲೂ ಪುರುಷರಿಗೆ ಸಮಾನವಾಗಿ ಮಹಿಳೆಯರು ಹೋರಾಡಲಿದ್ದಾರೆ.