ನವದೆಹಲಿ: ಓದುವ ಮನಸ್ಸಿದ್ದರೆ ವಯಸ್ಸೇ ಎಷ್ಟೇ ಆಗಿರಲಿ, ಸಾಧನೆ ಮಾಡಬಹುದು ಎಂಬುದಕ್ಕೆ ಈ ಮಹಿಳೆಯೇ ಸಾಕ್ಷಿ.
45 ವರ್ಷದ ಮೂರು ಮಕ್ಕಳ ತಾಯಿಯಾಗಿರುವ ಬುಲ್ ಬುಲಿ ಖತೂನ್ ಎಂಬಾಕೆ ಇದೀಗ ಎಸ್ಎಸ್ಎಲ್ ಸಿ ಪರೀಕ್ಷೆ ಕ್ಲಿಯರ್ ಮಾಡಿದ್ದಾಳೆ. 22 ವರ್ಷಗಳ ಹಿಂದೆ ಆಕೆ ಓದು ಬಿಟ್ಟಿದ್ದಳಂತೆ. ಇದೀಗ ಅಸ್ಸಾಂ ಬೋರ್ಡ್ ಎಕ್ಸಾಂ ಬರೆದು ಮಾದರಿಯಾಗಿದ್ದಾಳೆ.
ಇದೀಗ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಗೆ ಮುಂದಿನ ದಿನಗಳಲ್ಲಿ ಹೈಯರ್ ಸ್ಟಡೀಸ್ ಮಾಡುವ ಆಸೆಯಂತೆ. 22 ವರ್ಷಗಳ ಗ್ಯಾಪ್ ನ ನಂತರ ನಾನು ಎಸ್ಎಸ್ಎಲ್ ಸಿ ಓದಿದೆ. ನನ್ನ ಹಾಗೆ ಆಸೆ ಇಟ್ಟುಕೊಂಡು ಮಹಿಳೆಯರು ಮಜುಗುರಪಟ್ಟುಕೊಳ್ಳದೇ ತಮ್ಮ ಗುರಿ ತಲುಪಬೇಕೆನ್ನುವುದು ನನ್ನ ಹಾರೈಕೆ ಎಂದಿದ್ದಾರೆ ಬುಲ್ ಬುಲಿ ಖತೂನ್.